ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಬಾಲಕಿಯರ ಬಾಲಮಂದಿರ ಮತ್ತು ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಇರುವ ಮಕ್ಕಳಿಗೆ ದೈಹಿಕ/ಯೋಗ, ಸಂಗೀತಾ/ ಕ್ರಾಷ್ಟ್, ಇಂಗೀಷ್, ಗಣಿತ ಮತ್ತು ವಿಜ್ಞಾನ ಪಾಠ ಮಾಡಲು ಅರೆಕಾಲಿಕ ಶಿಕ್ಷಕರು, ಬೋಧಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜೂನ್ 15 ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶ್ರೀಮತಿ ಉಮಾ ನೇತಲಕರ ಕಟ್ಟಡ, ಹಬ್ಬುವಾಡಾ ರಸ್ತೆ, ಕಾರವಾರ ಇವರಿಗೆ ಅರ್ಜಿ ಸಲ್ಲಿಸಬೇಕು.
ಷರತ್ತುಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08382-220182 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಗಳಲ್ಲಿ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಬಿ.ಆಯ್.ಇ.ಆರ್.ಟಿ. (ಪ್ರಾಥಮಿಕ) 3 ಮತ್ತು ಬಿ.ಆಯ್.ಇ.ಆರ್.ಟಿ. (ಪ್ರೌಢ) 10 ವಿಶೇಷ ಶಿಕ್ಷಕರ ಹುದ್ದೆಗಳಿಗೆ 2024-25ನೇ ಸಾಲಿಗೆ ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷಚೇತನ ಮಕ್ಕಳ ಶಿಕ್ಷಣಕ್ಕೆ ಸಂಬAಧಿಸಿದ ಆರ್.ಸಿ.ಐ. ನಿಯಮದಂತೆ ಪ್ರಾಥಮಿಕ ಹಂತ (1 ರಿಂದ 5ನೇ ತರಗತಿ) D.Ed in special education from a RCI Approved institution and possess a valid RCI CRR number Or D.El.Ed with a recognized qualification (certificate/Diploma *) from an approved institution equivalent to a D.Ed in special education and a valid RCI CRR number—6-month training teaching in cross-disability areas in inclusive education.
ಪ್ರೌಢಶಾಲಾ ಹಂತ (6 ರಿಂದ 12ನೇ ತರಗತಿ) B.Ed in special education from a RCI approved institution with possess a valid RCI CRR number. Or B.Ed with a recognized qualification (Certificate/Diploma *) from an RCI-approved institution equivalent to a D.Ed in special education and a valid RCI CRR number. 6-month training teaching in cross-disability areas in inclusive education.
ಆಸಕ್ತ ಅಭ್ಯರ್ಥಿಗಳು ಈ ಮೇಲ್ಕಂಡ ವಿದ್ಯಾರ್ಹತೆಯನ್ನು ಪಡೆದ ಎಲ್ಲಾ ಅಂಕಪಟ್ಟಿಗಳು. ಕಾನ್ನೋಕೇಷನ್ ಪ್ರಮಾಣ ಪತ್ರ, ಆರ್.ಸಿ.ಐ. ಶಾಶ್ವತ ಪ್ರಮಾಣ ಪತ್ರದೊಂದಿಗೆ ಸ್ವವಿವರವುಳ್ಳ ಮಾಹಿತಿಯನ್ನು ಜೂನ್ 12ರ ಸಂಜೆ 5 ಗಂಟೆಯೊಳಗೆ ಅಂಚೆ ಅಥವಾ ಮುದ್ದಾಂ ಉಪ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕಾರವಾರ ಈ ವಿಳಾಸಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಛೇರಿ ದೂರವಾಣಿ ಸಂಖ್ಯೆ: 08382-295486 ಕ್ಕೆ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.