ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದೆಲ್ಲೆಡೆ ಮುಂದಿನ ಭಾನುವಾರ ಹಾಗೂ ಫೆಬ್ರವರಿ 7 ರಂದು ಪೋಲಿಯೋ ಲಸಿಕೆ ಕಾರ್ಯಕ್ರಮ

ಬೆಂಗಳೂರು: ರಾಜ್ಯದೆಲ್ಲೆಡೆ ಮುಂದಿನ ಭಾನುವಾರ ಹಾಗೂ ಫೆಬ್ರವರಿ 7 ರಂದು ಪೋಲಿಯೋ ಲಸಿಕೆ ಕಾರ್ಯಕ್ರಮ

Fri, 08 Jan 2010 14:54:00  Office Staff   S.O. News Service
ಬೆಂಗಳೂರು,ಜನವರಿ 8: ರಾಜ್ಯದಲ್ಲಿ ಬರುವ ಭಾನುವಾರ ಮತ್ತು ಮುಂದಿನ ತಿಂಗಳ 7 ರಂದು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಐದು ವಯೋಮಾನದ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಮಣ ರೆಡ್ಡಿ ಮನವಿ ಮಾಡಿದ್ದಾರೆ. 
 
ಪಲ್ಸ್ ಪೋಲಿಯೊ ಲಸಿಕೆ ಹಾಕಲು ವಿವಿಧ ಇಲಾಖೆಗಳ 97 ಸಾವಿರ ಸಿಬ್ಬಂದಿಯನ್ನು ಆಯೋಜಿಸಲಾಗಿದೆ.  ರಾಜ್ಯದ 73 ಲಕ್ಷ ಐದು ವರ್ಷದೊಳಗಿನ ಮಕ್ಕಳಿಗೆ 97 ಲಕ್ಷ ಲಸಿಕೆಗಳನ್ನ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 
 
ಸರ್ಕಾರದ ಜೊತೆಗೆ  ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ. ಕಳೆದ 15 ವರ್ಷಗಳಿಂದ ದೇಶಾದ್ಯಾಂತ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕಳೆದ ವರ್ಷ ತಮಿಳು ನಾಡಿನ ಈರೋಡ್‌ನಲ್ಲಿ ತೀವ್ರ ನಿಗಾಘಟಕದಲ್ಲಿ ಇದ್ದ ಮಗುವಿಗೆ ಲಸಿಕೆ ಹಾಕಿದಾಗ ಆ ಮಗು ಮೃತ ಪಟ್ಟಿತು ಎಂಬ ದೊಡ್ಡ ವದಂತಿ ದೇಶಾದ್ಯಂತ ಹರಡಿ ಪೊಷಕರು ಚಿಂತೆಗೆ ಕಾರಣವಾಗಿತ್ತು. 
ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಲಸಿಕೆ ಹಾಕುವುದರಿಂದ  ಮಕ್ಕಳಿಗೆ ಅಪಾಯವಿಲ್ಲ.  ಎಲ್ಲ ಧಾರ್ಮಿಕ ಮುಖಂಡರು ತಜ್ಞರು ಹಾಗೂ ಬುದ್ಧಿ ಜೀವಿಗಳ ಜೊತೆ ಸಮಾಲೋಚನೆಮಾಡಿ ಮನವರಿಕೆ ಮಾಡಿಕೊಡಲಾಗಿದೆ ಜಿಲ್ಲಾ ಆಡಳಿತಕ್ಕೂ ಸೂಚನೆ ನೀಡಲಾಗಿದೆ ಎಂದು ವಿವರಣೆ ನೀಡಿದರು.   
 
ಗ್ರಾಮೀಣ  ಭಾಗದಲ್ಲಿ 11,12  ಹಾಗೂ ನಗರ ಪ್ರದೇಶಗಳಲ್ಲಿ  11 ರಿಂದ ಮೂರು ದಿನಗಳ ಕಾಲ ಮನೆ  ಮನೆಗೆ ತೆರಳಿ ಲಸಿಕೆ ಹಾಕಲಾಗುವುದು. ನೆರೆಸಂತ್ರಸ್ತ  ಪ್ರದೇಶಗಳಲ್ಲಿ ಲಸಿಕೆ ಹಾಕಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು. 


Share: