ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹಾಸನ:ಶುಕ್ರವಾರ ನಡೆದ ಸಂಸ್ಕೃತ ಪಾಠಶಾಲೆಗಳ ಶಿಕ್ಷಕರ ತರಬೇತಿ ಶಿಬಿರ

ಹಾಸನ:ಶುಕ್ರವಾರ ನಡೆದ ಸಂಸ್ಕೃತ ಪಾಠಶಾಲೆಗಳ ಶಿಕ್ಷಕರ ತರಬೇತಿ ಶಿಬಿರ

Sat, 20 Feb 2010 03:35:00  Office Staff   S.O. News Service

ಹಾಸನ, ಫೆ.೧೯- ಪ್ರಸಕ್ತ ಶೈಕ್ಷಣಿಕ ಸಾಲಿನ ಮೈಸೂರು ವಿಭಾಗ ಮಟ್ಟದ ಸಂಸ್ಕೃತ ಪಾಠಶಾಲೆಗಳ ಶಿಕ್ಷಕರ ತರಬೇತಿ ಶಿಬಿರ ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆಯಿತು.

 

ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಂತರ ಮಾತನಾಡಿದ ಅವರು, ಸಂಸ್ಕೃತ ಭಾಷೆ ಕಲಿಕೆಯಿಂದ ಸುಸಂಸ್ಕೃತರಾಗಲು ಸಾಧ್ಯ. ಸಂಸ್ಕೃತ ಭಾಷೆಯನ್ನು ಯುವ ಪೀಳಿಗೆಯಲ್ಲಿ ಕಲಿಸುವ ನಿಟ್ಟಿನಲ್ಲಿ ಆದಿಚಂಚನಗಿರಿ ಮಠ ಹೆಚ್ಚಿನ ಆದ್ಯತೆ ವಹಿಸಿದೆ ಎಂದರು.

ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಸಂಸ್ಕೃತ ವಿಷಯ ಪರಿವೀಕ್ಷಕ ವಿದ್ವಾನ್ ಕೆ.ಗಂಗಣ್ಣ ಮಾತನಾಡಿ, ಶಿಕ್ಷಕರು ಶಿಬಿರದ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಕರೆ ನೀಡಿದರು.

 

ನಿವೃತ್ತ ಪ್ರಾಂಶುಪಾಲ ಪ್ರೊ|| ವಿ.ನರಹರಿ ಹಾಗೂ ಇತರರು ಉಪಸ್ಥಿತರಿದ್ದರು.

 


Share: