ಬೆಂಗಳೂರು, ಅ.15: ರಾಷ್ಟ್ರದಲ್ಲೇ ಮೊದಲ ಬಾರಿಗೆ ಮೊಬೈಲ್ ಮೂಲಕ ಬಸ್ ಟಿಕೆಟ್ ಕಾಯ್ದಿರಿಸುವ ಯೋಜನೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮ ಇಂದಿನಿಂದ ಜಾರಿಗೆ ತಂದಿದೆ.
ಸಾಧಾರಣಾ ಮೊಬೈಲ್‌ನಿಂದ ಕೇವಲ ಎಸ್‌ಎಂಎಸ್ ಮಾಡಿ ಬಸ್ ಟಿಕೆಟ್ ಕಾಯ್ದಿರಿಸುವ ಹಾಗು ರದ್ದುಪಡಿಸುವ ಯೋಜನೆಗೆ ಸಾರಿಗೆ ಸಚಿವ ಆರ್.ಅಶೋಕ್ ಇಂದಿಲ್ಲಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯಾವುದೇ ಮೂಲೆಯಲ್ಲಿ ಕುಳಿತು ksrtc to 6766 ಗೆ ಎಸ್‌ಎಂಎಸ್ ಮಾಡುವ ಮೂಲಕ ಟಿಕೆಟ್ ಕಾಯ್ದಿರಿಸಬಹುದು ಎಂದು ವಿವರ ನೀಡಿದರು.
ಇದು ಅವತಾರ್ ಯೋಜನೆಯ ವಿಸ್ತೃತ ರೂಪವಾಗಿದೆ. ಪ್ರತಿ ದಿನ ಒಂದು ಲಕ್ಷ ಟಿಕೆಟ್‌ನಲ್ಲಿ ಏಜೆಂಟ್ ಮೂಲಕ ಬುಕಿಂಗ್ ಆಗುತ್ತಿರುವುದು ಕೇವಲ ೧೬ ಸಾವಿರ ಮಾತ್ರ. ಈ ವಿನೂತನ ಯೋಜನೆಯಿಂದ ಏಜೆಂಟರ್‌ಗೆ ನಷ್ಟವಾಗುವುದಿಲ್ಲ.
ಐರಾವತ್, ಅಂಬಾರಿ, ಮೇಘದೂತ, ರಾಜಹಂಸ, ಶೀತಲ್, ಕರ್ನಾಟಕ ಸಾರಿಗೆ ಸೇರಿದಂತೆ ಎಲ್ಲ ವಿಧದ ಬಸ್‌ಗಳಲ್ಲೂ ಕಾಯ್ದಿರಿಸಬಹುದು. ಈ ಯೋಜನೆ ಜಾರಿಗಾಗಿ ಎನ್‌ಜಿಪೇ ಮೊಬೈಲ್ ಮಾಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಒಂದು ಬಾರಿ ಮಾತ್ರ ಮೂರು ರೂಪಾಯಿ ವೆಚ್ಚ ಮಾಡಿ ಜಿಪಿಆರ್‌ಎಸ್ ಮೊಬೈಲ್‌ಗಳಿಗೆ ಎನ್‌ಜಿಪೇ ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಒಮ್ಮೆ ನೋಂದಣಿ ಮಾಡಿಕೊಂಡ ನಂತರ ಟಿಕೆಟ್ ಕಾಯ್ದಿರಿಸಬಹುದು. ಎಲ್ಲ ದರ್ಜೆಯ ಬಸ್‌ಗಳಲ್ಲಿ ಬೇಕಾದ ಆಸನ ಹಾಗೂ ಹತ್ತುವ ಹಾಗೂ ಇಳಿಯುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಕ್ರೆಡಿಟ್, ಡೆಬಿಟ್, ನಗದು ಕಾರ್ಡ್‌ಗಳಲ್ಲದೆ, ಎಚ್.ಡಿ.ಎಫ್.ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಖಾತೆ ಮೂಲಕ ಹಣ ಪಾವತಿಸಬಹುದು. ಟಿಕೆಟ್ ಬುಕಿಂಗ್ ಪೂರ್ಣಗೊಂಡ ನಂತರ ಸಿಗುವ ಪಿಎನ್‌ಆರ್ ಸಂಖ್ಯೆ ಮೂಲಕ ಇ-ಟಿಕೆಟ್ ಮುದ್ರಿಸಿ ಇ-ಮೇಲ್ ಮಾಡಲಾಗುತ್ತದೆ.
ಇ-ಮೇಲ್ ಸೌಲಭ್ಯವಿಲ್ಲದವರು, ಟಿಕೆಟ್ ಕೌಂಟ್‌ಗಳಲ್ಲಿ ಪಿಎನ್‌ಆರ್ ಸಂಖ್ಯೆ ನೀಡಿ ಟಿಕೆಟ್ ಪಡೆಯಬಹುದು. ಪಿಎನ್‌ಆರ್ ಸಂಖ್ಯೆ ಎಸ್‌ಎಂಎಸ್ ಮೂಲಕವೂ ಲಭ್ಯವಾಗಲಿದೆ ಎಂದ ಅವರು, ಪ್ರಯಾಣಿಸುವಾಗ ಕಡ್ಡಾಯವಾಗಿ ಗುರುತಿನಚೀಟಿ ಇರುವ ಭಾವಚಿತ್ರ ಹೊಂದಿರಬೇಕು ಎಂದವರು.
ನರ್ಮ್ ಯೋಜನೆಯ ಬಿಎಂಟಿಸಿ ಬಸ್ ವಿನ್ಯಾಸ ಹಾಗೂ ಮಾದರಿಯ ಬಗ್ಗೆ ಕೇಂದ್ರ ಸರಕಾರ ಪ್ರಶಂಸಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದರು.
ಬಿಜಾಪುರದ ನೆರೆಪೀಡಿತ ಸಂತ್ರಸ್ತರಿಗೆ ಬಿಎಂಟಿಸಿ ವತಿಯಿಂದ 40 ಲಕ್ಷ ರೂ. ಮೌಲ್ಯದ 9 ಟನ್ ಆಹಾರ ಧಾನ್ಯ, ಬಟ್ಟೆ, ಸಾಬೂನು ಮೊದಲಾದ ಸಾಮಗ್ರಿಗಳನ್ನು ಇದೇ ಸಂದರ್ಭದಲ್ಲಿ ಕಳುಹಿಸಿಕೊಡಲಾಯಿತು