ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹುಬ್ಬಳ್ಳಿ: ನೆರೆಪೀಡಿತ ನೋಟುಗಳ ಬದಲಾವಣೆಗೆ ಅವಕಾಶ

ಹುಬ್ಬಳ್ಳಿ: ನೆರೆಪೀಡಿತ ನೋಟುಗಳ ಬದಲಾವಣೆಗೆ ಅವಕಾಶ

Sat, 31 Oct 2009 03:10:00  Office Staff   S.O. News Service
ಹುಬ್ಬಳ್ಳಿ, ಅಕ್ಟೋಬರ್ ೩೧: ಪ್ರವಾಹದ ಸಂದರ್ಭದಲ್ಲಿ ಹಾಳಾಗಿರುವ ನೋಟುಗಳನ್ನು ಬದಲಾಸಿಕೊಳ್ಳಲು ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ. ನೀರಿನಲ್ಲಿ ನೆನೆದ, ಮಣ್ಣಿನ ಕಲೆಯಾದ, ಬಳಸಲಾಗದ ಸ್ಥಿತಿಗೆ ತಲುಪಿರುವ ನೋಟುಗಳನ್ನು ನೆರೆಪೀಡಿತ ಪ್ರದೇಶದಲ್ಲಿರುವ ವಾಣಿಜ್ಯ ಬ್ಯಾಂಕ್‌ಗಳಲ್ಲಿ ನೀಡಿ ಬದಲಾಯಿಸಿಕೊಳ್ಳಬಹುದು.
 
ಬೆಳಗಾವಿ, ಗುಲ್ಬರ್ಗ, ರಾಯಚೂರು, ಬಿಜಾಪುರ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ಹಾವೇರಿ, ಬೀದರ್, ಗದಗ, ದಾವಣಗೆರೆ, ಉತ್ತರ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ನೋಟು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಆರ್‌ಬಿ‌ಐ ಪ್ರಕಟಣೆ ತಿಳಿಸಿದೆ.


Share: