ಹಾಸನ-ಮಾ-೧೫. ಕಾಪೋರೇಶನ್ ಬ್ಯಾಂಕಿನ ೧೦ನೆಯ ವಾರ್ಷಿಕೋತ್ಸವದ ಅಂಗವಾಗಿ ನಗರದ ಸರ್ಕಾರ ಆಸ್ಪತ್ರೆ ಆವರಣದಲ್ಲಿರುವ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಗಂಗಾಧರ್ ಉದ್ಘಾಟಿಸಿದರು. ಬ್ಯಾಂಕಿನ ಹಾಸನ ವಲಯ ಉಪ ಮಹಾ ಪ್ರಬಂಧಕ ನರಸಿಂಹರಾವ್ ಹಾಗೂ ಸಹಾಯಕ ಮಹಾ ಪ್ರಬ್ರಂಧಕ ನರಸಿಂಹರಾವ್ ಹಾಗೂ ಸಹಾಯಕ ಮಹಾ ಪ್ರಬಂಧಕ ಕೆ.ಆರ್.ನಾಯಕ್ ಉಪಸ್ಥಿತರಿದ್ದರು.
ಕಾಪೋರೇಷನ್ ಬ್ಯಾಂಕಿನ ಉದ್ಯೋಗಿಗಳು, ಗ್ರಾಹಕರುಗಳ ಜೊತೆ ಮಲೆನಾಡು ವಿದ್ಯಾರ್ಥಿಗಳು, ಶ್ರೀ ವಿದ್ಯಾನಿಕೇತನ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲ ಶ್ರೀ ಸತೀಶ್ ಅವರ ನೇತೃತ್ವದಲ್ಲೇ ಶಿಬಿರದಲ್ಲಿ ರಕ್ತ ದಾನ ಮಾಡಿದರು.