ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೈಸೂರು : ಹಸಿದೂ ಹಸಿದೂ ಸಾವು

ಮೈಸೂರು : ಹಸಿದೂ ಹಸಿದೂ ಸಾವು

Thu, 22 Apr 2010 03:21:00  Office Staff   S.O. News Service

ಚುನಾವಣೆಗಳ ಮೇಲೆ ಚುನಾವಣೆಗಳು ಬಂದು ಹೋಗುತ್ತಿವೆಹೇಗೋ ಅಂತೂ ಗೆಲುವು ಸಾಧಿಸಿಬಿಟ್ಟೆವು ಅಂತ ಬಿಜೆಪಿ ಬೀಗುತ್ತಿದೆಈ ನಡುವೆ ಸಾಲಬಾಧೆಯನ್ನು ತಾಳಲಾರದ ರೈತರ ಆತ್ಮಹತ್ಯೆಗಳು ನಡೆಯುತ್ತಲೇ ಇವೆಚುನಾವಣೆಗಳ ಕಾಲಕ್ಕೆ ಘೋಷಿಸುವ ಯೋಜನೆಗಳು ಕೊಟ್ಟ ಭರವಸೆಗಳು ಇನ್ನೂ ಹಸಿಹಸಿಯಾಗೇ ಇವೆಇವೆಲ್ಲದರ ನಡುವೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಲ್ಲೇನಹಳ್ಳಿ ಹಾಡಿಯ ಚಿಕ್ಕಸಿದ್ಧಯ್ಯ ಎಂಬ ಆದಿವಾಸಿಯೊಬ್ಬರು ತಿನ್ನಲು ಏನೂ ಇಲ್ಲದೇ ಹಸಿದೂ ಹಸಿದೂ ಹಾಗೇ ಅಸುನೀಗಿದ ಸಂಗತಿ ದಾರುಣವಾದುದು.

ಇದು ಮಾಧ್ಯಮಗಳಲ್ಲಿ ಪ್ರಕಟವಾದ ಇತ್ತೀಚಿನ ಒಂದು ಪ್ರಕರಣ ಅಷ್ಟೆಇಂತಹ ಎಷ್ಟೋ ದಾರುಣ ಸಾವುಗಳುಸಹಜ ಸಾವುಗಳೆಂಬಂತಾಗಿ ಸತ್ತವರ ಹಸಿವಿನ ಸಂಕಟ ಸುದ್ದಿಯೇ ಆಗದೇ ದೇಹ ಮಸಣ ಸೇರುತ್ತಿರಬಹುದುಅಂತ್ಯೋದಯ,ಬಿಪಿಎಲ್ಎಪಿಎಲ್ನೆಮ್ಮದಿ ಕೇಂದ್ರದ ಕಾರ್ಡ್ ಗಳುಗ್ರಾಮೀಣ ಉದ್ಯೋಗ ಖಾತ್ರಿ, …. ಹೀಗೆ ಏನೇನೋ ಯೋಜನೆಗಳ ಮೇಲೆ ಯೋಜನೆಗಳು ಹೇಗೆ ಜಾರಿಯಾಗುತ್ತಿವೆ ಎಂಬುದಕ್ಕೂ ಕೂಡ ಇದು ಒಂದು ಮಾನದಂಡವಾಗಿದೆಎಂದಿನಂತೆ ಸರ್ಕಾರದ ವತಿಯಿಂದ ಸ್ಪಷ್ಟತೆ ಬಂದಿದೆಇದು ಹಸಿವಿನ ಸಾವಲ್ಲ ಎಂದುಸತ್ತ ಚಿಕ್ಕಸಿದ್ದಯ್ಯ ಮಾತನಾಡುವಂತಿದ್ದರೆ ಒಂದು ಮಾತು ಕೇಳಿಯೇಬಿಡಬಹುದಿತ್ತುಅದು ಆಗದುಸರ್ಕಾರಕ್ಕೂ ಅದು ಗೊತ್ಕಾ

ಅರಣ್ಯ ಅಭಿವೃದ್ಧಿ ಶುಲ್ಕ ಕಟ್ಟದೇ ಭಂಡಾಟ

ಅಗೆದು ಅಗೆದು ತೆಗೆಯುತ್ತಾ ಹೋದಂತೆ ಬಳ್ಳಾರಿ ಜಿಲ್ಲೆಯ ಕಬ್ಬಿಣದ ಅದಿರು ಖಾಲಿಯಾಗುತ್ತಾ ಹೋಗುತ್ತಿರಬಹುದುಆದರೆ ಅದರೊಂದಿಗೆ ಹೆಣೆದುಕೊಂಡಿರುವ ಹಗರಣಭ್ರಷ್ಟತೆ ಮಾತ್ರ ಮುಗಿಯುವಂತೇ ಕಾಣುತ್ತಿಲ್ಲಗಣಿ ಲೂಟಿಕೋರರ ಲೂಟಿಯ ನಾನಾ ಮುಖಗಳು ದಿನದಿನವೂ ಬಯಲಾಗುತ್ತಲೇ ಇವೆಇದು ಮತ್ತೊಂದು ಮುಖ.

ಬಳ್ಳಾರಿಸಂಡೂರುಹೊಸಪೇಟೆ ವಲಯಗಳಲ್ಲಿ ಗಣಿಗಾರಿಕೆ ನಡೆಸುವ `ಪ್ರಭಾವಿಗಳು 2008ರ ಮಾರ್ಚ್ ನಿಂದ 2009ರ ಮಾರ್ಚ್ ವರೆಗೆ 204.89 ಕೋಟಿಯಷ್ಟು ಅರಣ್ಯ ಅಭಿವೃದ್ಧಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆಶುಲ್ಕ ಎಷ್ಟೆಲ್ಲಾ ಬಾಕಿ ಇದ್ದಾಗಲೂ ಗಣಿಗಾರಿಕೆಅದಿರು ಸಾಗಣೆಗಂತೂ ಯಾವ ತೊಂದರೆಯೂ ಆಗಿಲ್ಲಮಾಹಿತಿ ಹಕ್ಕು ಕಾಯ್ದೆ ಆಧಾರದಲ್ಲಿ ಬಾಕಿ ಇರಿಸಿಕೊಂಡವರ ಕುರಿತ ಮಾಹಿತಿ ಕೇಳಿದರೆ ಬಾಕಿ ಉಳಿಸಿಕೊಂಡ ಕಂಪನಿಗಳು ಯಾವುದೆಂಬ ವಿವರ ನೀಡಲು ಇಲಾಖೆ ನಿರಾಕರಿಸಿದೆಕಂಪನಿಗಳ ಪ್ರಭಾವ ಅಷ್ಟಿದೆ.

ಕುರಿಕಾಯಿ ತೋಳ ಎಂದರೆ ಅದಕ್ಕಿಂತ ಸಿಹಿ ಸುದ್ದಿತೋಳಕ್ಕೆ ಇನ್ನೇನಿದ್ದೀತುಗಣಿ ಲೂಟಿಯ ವಿಚಾರವಾಗಿ ಎಷ್ಟೆಲ್ಲಾ ಚಳುವಳಿ ಹೋರಾಟವಾದವಿವಾದ ನಡೆಯುತ್ತಿರುವಾಗಲೂ ಹೀಗೆ ನಡೆಯುತ್ತದೆ ಎಂದರೆ ಈ `ಪ್ರಭಾವಿಗಳ ಭಂಡತನವನ್ನು ಮೆಚ್ಚಲೇಬೇಕುಯಡಿಯೂರಪ್ಪನವರು ಅದನ್ನು ಮೆಚ್ಚಿಕೊಂಡದ್ದರಿಂದಲೇ ಅಲ್ಲವೇಪ್ರಭಾವಿಗಳು ಸಚಿವರಾಗಿರುವುದು.

 

ಸೌಜನ್ಯ: ಜನಶಕ್ತಿ


Share: