ಬೆಂಗಳೂರು, ಅ.11: ಸದಾ ತಮ್ಮ ದುರ್ಗತಿಯ ಕುರಿತು ವ್ಯರ್ಥ ಚರ್ಚೆ ಮತ್ತು ಪರದೂಷಣೆಯನ್ನು ಕೈಬಿಟ್ಟು ಆಧುನಿಕ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಸ್ವಾವಲಂಬಿಗಲಾಗುವಂತೆ ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ. ಬಿ. ಶೇಕ್ ಅಲಿ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದರು.
ಅಲ್-ಅಮೀನ್ ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ, ಅಲ್-ಆಮೀನ್ ಅಖಿಲ ಭಾರತ ಸಮುದಾಯ ನಾಯಕತ್ವ ಪ್ರಶಸ್ತಿ ಸ್ವೀಕರಿಸಿದ ನಂತರ ‘ಇಸ್ಲಾಮ್ ಧರ್ಮ- ಪಾಶ್ಚಾತ್ಯ ಸವಾಲುಗಳು ಮತ್ತು ಭಾರತೀಯರ ಪ್ರತಿಕ್ರಿಯೆ’ ಎಂಬ ವಿಷಯದಲ್ಲಿ ಟಿಪ್ಪು ಸುಲ್ತಾನ್ ಸ್ಮಾರಕ ದತ್ತಿ ಉಪನ್ಯಾಸ ನೀಡುತ್ತ ಮಾತನಾಡುತ್ತಿದ್ದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ರಂಗಗಳಲ್ಲಿ ಹಲವು ದಶಕಗಳ ಕಾಲ ನಾಯಕತ್ವದ ಸ್ಥಾನದಲ್ಲಿದ್ದ ಮುಸ್ಲಿಮ್ ಸಮುದಾಯ ಕ್ರಮೇಣ ಹಿಂಬಾಲಕನ ಸ್ಥಾನಕ್ಕೆ ತಳ್ಳಲ್ಪಟ್ಟತು. ಇದಕ್ಕೆ ಸ್ವಯಂಕೃತ ಕಾರಣಗಳಿದ್ದರೂ, ಸರಕಾರದ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದರು.
ತಮ್ಮ ಪ್ರಮಾದಗಳನ್ನು ಸರಿಪಡಿಸಿಕೊಂಡು ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಸಮರ್ಥ ಮತ್ತು ಸಾರ್ಥಕ ಬದುಕಿಗೆ ನಾವೆಲ್ಲ ಸಾಕ್ಷಿಗಳಾಗಬೇಕು.
ಜೀವನದಲ್ಲಿ ನಿರಂತರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಹೊಣೆಗಾರಿಕೆ ಪ್ರಜ್ಞೆ ಬೆಳಸಿಕೊಳ್ಳಬೇಕು. ನಿರಾಶೆ, ನಿರುತ್ಸಾಹ ಹಾಗೂ ಅಪ್ರಾಮಾಣಿ ಕತೆ ನಮ್ಮ ಸಾಮೂಹಿಕ ಜೀವನವನ್ನು ನಾಶ ಮಾಡುತ್ತಿವೆ ಎಂದು ಅವರು ವಿಷಾದಿಂದ ನುಡಿದರು.
ಜಾಗತಿಕ ಮಟ್ಟದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರಿಗೆ ಎದುರಾಗಿರುವ ಸವಾಲು ಮತ್ತು ಸಮಸ್ಯೆಗಳೊಂದಿಗೆ ಭಾರತೀಯ ಮುಸ್ಲಿಮರು ಸೂಕ್ಷ್ಮವಾಗಿ ವ್ಯವಹರಿಸುವ ಅಗತ್ಯವಿದೆ.
ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನಲೆಯಲ್ಲಿ ನಮ್ಮ ಪ್ರತಿಯೊಂದು ಹೆಜ್ಜೆಯೂ ಜಾಗತಿಕ ಚರ್ಚಾ ವಿಷಯವಾಗುತ್ತದೆ. ಎಲ್ಲಾ ಸವಾಲುಗಳಿಗೆ ನಮ್ಮ ಧೀಮಂತ ಬೌದ್ದಿಕತೆ ಮತ್ತು ಯುಕ್ತಿಯಿಂದ ಉತ್ತರಿಸಬೇ ಕಾಗಿದೆ ಎಂದು ಸೂಕ್ಷ್ಮವಾಗಿ ಹೇಳಿದರು.
ಸಮುದಾಯದ ಯುವಪೀಳಿಗೆಯ ತರಬೇತಿ, ನಿಯಂತ್ರಣ ಅವರಲ್ಲಿ ಸಮತೋಲನ ವೈಚಾರಿಕತೆ ಬೆಳೆಸುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಅತಿ ಅಗತ್ಯವಾಗಿದೆ. ಇದು ಮಾಡದಿದ್ದರೆ ಮುಂದಿನ ಅನೇಕ ಶತಮಾನಗಳು ಪರಿತಪಿಸಬೇಕಾದೀತು ಎಂದು ಎಚ್ಚರಿಸಿದ ಅವರು, ನಮ್ಮ ಒಂದು ಕ್ಷಣದ ನಿರ್ಲಕ್ಷ ದಶಕಗಳ ಅನಾಹುತಗಳಿಗೆ ಕಾರಣವಾಗಲಿದೆ ಇದಕ್ಕೆ ಯಾವ ಸಂದರ್ಭದಲ್ಲೂ ಅವಕಾಶ ನೀಡದಿರಿ ಎಂದು ಕಳಕಳಿಯಿಂದ ಕೇಳಿಕೊಂಡರು. ಆಂತರಿಕ ಭಿನ್ನಾಭಿಪ್ರಾಯ, ಕಚ್ಚಾಟ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಹಗುರಗೊಳಿಸಿದೆ. ನಮ್ಮ ಧ್ವನಿ, ಹೋರಾಟಗಳು ಕ್ಷೀಣಿಸುತ್ತಿವೆ. ನಮ್ಮ ಧಾರ್ಮಿಕ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಹಾಗೂ ತೀರ್ಮಾನಗಳು ನಮ್ಮ ಧಾರ್ಮಿಕತೆಯನ್ನು ಹಾಸ್ಯಸ್ಪದಗೊಳಿಸಿದೆ. ನಮ್ಮನ್ನು ಸುಧಾರಿಸಿಕೊಳ್ಳಲು ಇದು ಸಕಾಲ, ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಖಂಡಿತವಾಗಿಯೂ ಇನ್ನೊಬ್ಬರನ್ನು ದೂಷಿಸುವ ಯಾವ ಹಕ್ಕು ನಮಗಿರುವುದಿಲ್ಲ ಎಂದು ಅತ್ಯಂತ ನೋವಿನಿಂದ ನುಡಿದರು. ದೇಶದ ಸ್ವಾತಂತ್ರ, ಸ್ವಾಯತ್ತತೆ ಜೊತೆಗೆ ಮುಸ್ಲಿಮರ ಸರ್ವಾಂUಣ ಅಭಿವೃದ್ದಿಗೆ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿದ ಅಬುಲ್ ಕಲಾಂ ಆಝಾದ್, ಸರ್. ಸೈಯದ್ ಅಹ್ಮದ್ ಖಾನ್ ಮತ್ತು ಅಲ್ಲಾಮ ಇಕ್ಬಾಲ್ ಸೇರಿದಂತೆ ಅನೇಕ ಮುಸ್ಲಿಮ್ ಸಮುದಾಯದ ಮುಂಚೂಣಿ ನಾಯಕರ ಸೇವೆಯನ್ನು ಸ್ಮರಿಸಿದ ಅವರು, ಮುಸ್ಲಿಮ್ ಸಮುದಾಯ ಅವರ ಹಾದಿಯಲ್ಲಿ ಸಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಮುಮ್ತಾಜ್ ಅಹ್ಮದ್ ಖಾನ್, ಗೌರವ ಕಾರ್ಯದರ್ಶಿ ಫಾರೂಖ್ ಮುಹಮ್ಮದ್, ಶಾಸಕ ರೋಶನ್ ಬೇಗ್, ಮೌಲಾನ ರಿಯಾಝುರ್ರಹಮಾನ್ ರಶಾದಿ, ಇರ್ಫಾನ್ ರಝಾಖ್, ಸದಾಖತ್ ಪೀರಾಂ ಮತ್ತಿತರರು ಹಾಜರಿದ್ದರು