ಭಟ್ಕಳ, ಅಕ್ಟೋಬರ್ 11: ಭಟ್ಕಳದಿಂದ ಹಾದು ಹೋಗಿರುವ ರಾ.ಹೆ. ೧೭ ತೀರ ಹದಗೆಟ್ಟಿದ್ದು ಇದರ ದುರಸ್ತಿಗೆ ಹೆದಾರಿ ಇಲಾಖೆಯು ಕ್ರಮ ಕೈಗೊಂಡಿದ್ದು ಬೆಳಕೆಯ ಗಡಿಯಿಂದ ಶಿರಾಲಿಯ ವರೆಗಿನ ೧೪ ಕಿ.ಮಿ ಹೆದ್ದಾರಿಯನ್ನು ದುರಸ್ತಿಗೊಳಿಸಿ ಡಾಂಬರಿಕರಣ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದು ಇದಕ್ಕಾಗಿ ೮ಕೋಟಿ ರೂ ಮಂಜೂರಿಯಾಗಿದೆ ಎಂದು ಶಾಸಕ ಜೆ.ಡಿ.ನಾಯ್ಕ್ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಟಿಯೊಂದರಲ್ಲಿ ಈ ಮಾಹಿತಿಯನ್ನು ನೀಡಿದ ಅವರು ಕಳೆದ ಎರಡು ವರ್ಷಗಳಿಂದಲೆ ಭಟ್ಕಳ ತಾಲೂಕಿನ ಮುರುಡೇಶ್ವರದಿಂದ ಗೊರ್ಟೆಯ ವರೆಗೆ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ಈ ಕುರಿತು ಹಲವಾರು ಸಂಘ ಸಂಸ್ಥೆಗಳು ,ಸಾರ್ವಜನಿಕರು ಹಲವಾರು ಬಾರಿ ಸರಕಾರದ ಗಮನವನ್ನು ಸಳೆಯಲು ಪ್ರಯತ್ನಿಸಿವೆ ತಾನು ಸಹ ಸರಕಾರದ ಮುಂದೆ ಇದರ ಬೇಡಿಕೆಯನ್ನು ಇಟ್ಟಿದ್ದು ಈಗ ಹಣವನ್ನು ಮಂಜೂರು ಮಾಡಲಾಗಿದೆ ಟೆಂಡರ್ ಪ್ರಕ್ರಿಯೆಯು ಮುಗಿದಿದ್ದು ಮಳೆಯು ಸಂಪೂರ್ಣವಾಗಿ ನಿಂತ ಕೂಡಲೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.