ಭಟ್ಕಳ, ಅಕ್ಟೋಬರ್ 27: ಪೊಲೀಸರು ಯಾರ ಕೈಗೊಂಬೆಯೂ ಅಲ್ಲ, ಪಕ್ಷ ಪಾತಿಯೂ ಅಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ ನೇರ ಮಾತುಗಳಲ್ಲಿ ಬಿಸಿ ಮುಟ್ಟಿಸಿದ್ದಾರೆ.
ಅವರು ಭಟ್ಕಳದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಜನರ ಸಹಕಾರವನ್ನು ಬಯಸಿದ ಅವರು ಹಿಂಸೆಗೆ ಪ್ರೇರೇಪಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಎರಡೂ ಕೋಮಿನ ಮುಖಂಡರುಗಳು, ಶಾಂತಿ ಕದಡುವವರ ನಡೆಯ ಮೇಲೆ ನಿಗಾರಿಸಿ ಪರಿಹಾರ ಕಂಡುಕೊಳ್ಳಿ ಎಂದು ವಿನಂತಿಸಿಕೊಂಡ ಅವರು ಪರಿಸ್ಥಿತಿ ಕೈ ಮೀರಿದಾಗ ಕಾನೂನು ತನ್ನದೇ ಆದ ಪಥದಲ್ಲಿ ಸಾಗುತ್ತದೆ. ನಂತರ ಪೊಲೀಸ್ ಇಲಾಖೆಯ ಕಾರ್ಯಗಳಲ್ಲಿ ಮೂಗು ತೂರಿಸಲು ಬರದಂತೆ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.