ಕಾರವಾರ, ಏಪ್ರಿಲ್ ೨೫: ಮಲ್ಪೆ ಮೂಲದ ಎಸ್.ಕೆ. ಫಿಶರೀಸ್ ಎಂಬ ಹೆಸರಿನ ಬೋಟೊಂದರ ಫೈಬರ್ ತುಂಡಾಗಿ ನೀರು ನುಗ್ಗಿದ ಘಟನೆ ಶನಿವಾರ ನಸುಕಿನ ಜಾವ ಪಣಜಿ ಸಮೀಪ ಆಳ ಸಮುದ್ರದಲ್ಲಿ ನಡೆದಿದೆ.
ಸಮೀಪದಲ್ಲಿಯೇ ಇದ್ದ ಮಲ್ಪೆ ಮೂಲದ ಇನ್ನೆರಡು ಬೋಟ್ಗಳು ಮೀನುಗಾರರು ಅದರಲ್ಲಿದ್ದ ೭ ಮೀನುಗಾರರನ್ನು ರಕ್ಷಿಸಿ, ಅಪಾಯದಲ್ಲಿದ್ದ ಬೋಟನ್ನು ಕಾರವಾರದ ಬಂದರಿಗೆ ಎಳೆದು ತಂದು ನಿಲ್ಲಿಸಿದ್ದಾರೆ. ಬೇರೆ ಬೋಟಿನವರು ರಕ್ಷಿಸಿದ್ದರಿಂದ ಬೋಟ್ ಮುಳುಗುವದು ತಪ್ಪಿದ್ದು, ನೀರು ಒಳನುಗ್ಗಿದ್ದರಿಂದ ಬೋಟ್ಗೆ ಸ್ವಲ್ಪ ಹಾನಿಯಾಗಿದೆ.
ಕಳೆದ ವಾರವಷ್ಟೇ ಗೋವಾ ಮೂಲದ ಬೋಟೊಂದಕ್ಕೆ ಇದೇ ರೀತಿ ನೀರು ನುಗ್ಗಿ ಅದನ್ನು ರಕ್ಷಿಸಿ ತರಲಾಗಿತ್ತು. ಈ ಸಂದರ್ಭದಲ್ಲಿ 26 ಮೀನುಗಾರರನ್ನು ರಕ್ಷಿಸಲಾಗಿತ್ತು.