ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಪುತ್ತೂರು: ಉತ್ತರ ಕರ್ನಾಟಕ ನೆರೆಬಾಧಿತರಿಗೆ ಸಹಾಯ ಹಸ್ತ ಚಾಚಿದ ಮುಸ್ಲಿಂ ಸಂಯುಕ್ತ ಜಮಾತ್

ಪುತ್ತೂರು: ಉತ್ತರ ಕರ್ನಾಟಕ ನೆರೆಬಾಧಿತರಿಗೆ ಸಹಾಯ ಹಸ್ತ ಚಾಚಿದ ಮುಸ್ಲಿಂ ಸಂಯುಕ್ತ ಜಮಾತ್

Mon, 05 Oct 2009 03:10:00  Office Staff   S.O. News Service
ಪುತ್ತೂರು, ಅ.4: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಅತಿವೃಷ್ಟಿ ಬಾಧಿತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೫೦ ಸಾವಿರ ರೂ. ನೀಡಲು ಪುತ್ತೂರು ಮತ್ತು ಸುಳ್ಯ ತಾಲೂಕು ಮುಸ್ಲಿಂ ಸಂಯುಕ್ತ ಜಮಾ‌ಅತ್ ತೀರ್ಮಾನಿಸಿದೆ.

ರವಿವಾರ ನಡೆದ ಜಮಾ‌ಅತ್‌ನ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅಧ್ಯಕ್ಷ ಎಸ್.ಇಬ್ರಾಹೀಂ ಹಾಜಿ ಕಮ್ಮಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಸಂಯುಕ್ತ ಜಮಾ‌ಅತ್‌ನ ಹಲವು ವರ್ಷಗಳ ಬೇಡಿಕೆಯಾಗಿರುವ ಹಜ್ಜ್ ಯಾತ್ರಿಕರಿಗೆ ಮಂಗಳೂರಿ ನಿಂದಲೇ ಸೌಲಭ್ಯ ಕಲ್ಪಿಸಿದ ಸರಕಾರಕ್ಕೆ ಮತ್ತು ಹಜ್ಜ್ ಕಮಿಟಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಭೆಯಲ್ಲಿ ತಾಲೂಕು ಮುಸ್ಲಿಂ ಸಂಯುಕ್ತ ಜಮಾ‌ಅತ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಟ್ಟಾ, ಶರೀ‌ಅತ್ ಸಲಹಾ ಸಮಿತಿ ನಿರ್ದೇಶಕ ಡಾ.ಶಾಹ್ ಮುಸ್ಲಿಯಾರ್, ಪದಾಧಿಕಾರಿಗಳಾದ ಮುಹಮ್ಮದ್ ಹಾಜಿ ಕಬಕ, ಉಸ್ಮಾನ್ ಹಾಜಿ ಮಿತ್ತೂರು, ಅರ್ತಿಕರೆ ಅಬ್ದುರ್ರಹ್ಮಾನ್ ಹಾಜಿ, ಉಸ್ಮಾನ್ ಹಾಜಿ ಸಂಪ್ಯ, ಬಿ.ಎ.ಶುಕೂರ್, ಅಬ್ದುರ್ರಹ್ಮಾನ್ ಬೈತಡ್ಕ, ಬಶೀರ್ ಶೇಖಮಲೆ, ಹುಸೈನ್ ದಾರಿಮಿ ರೆಂಜಲಾಡಿ, ಖಾಸಿಂ ಹಾಜಿ ಮಿತ್ತೂರು, ಎಸ್. ಉಮರ್ ಶಾಫಿ, ಇಸ್ಮಾಯೀಲ್ ಗಟ್ಟಿಮನೆ, ಸುಲೈಮಾನ್ ಸಾಲ್ಮರ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

Share: