ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕಳೆದ ವರ್ಷದಂತೆಯೇ ಈ ವರ್ಷವೂ ಶಿವರಾತ್ರಿಯಂದು ಗಂಗಾಜಲ ವಿತರಣೆ - ಕೃಷ್ಣಯ್ಯ ಶೆಟ್ಟಿ

ಬೆಂಗಳೂರು: ಕಳೆದ ವರ್ಷದಂತೆಯೇ ಈ ವರ್ಷವೂ ಶಿವರಾತ್ರಿಯಂದು ಗಂಗಾಜಲ ವಿತರಣೆ - ಕೃಷ್ಣಯ್ಯ ಶೆಟ್ಟಿ

Sat, 06 Feb 2010 15:10:00  Office Staff   S.O. News Service
ಬೆಂಗಳೂರು, ಫೆ. ೬: ಕಳೆದ ಬಾರಿಯಂತೆ ಈ ಸಾರಿಯೂ ಶಿವರಾತ್ರಿ ಹಬ್ಬದಂದು ರಾಜ್ಯದ ಪ್ರಮುಖ ಶಿವನ ದೇವಾಲಯಗಳಲ್ಲಿ ಪವಿತ್ರ ಗಂಗಾ ಜಲವನ್ನು ವಿತರಿಸಲಾಗುವುದು ಎಂದು ಮಾಜಿ ಸಚಿವ, ಧಾರ್ಮಿಕ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ಹೇಳಿದ್ದಾರೆ. 

ಗಂಗಾ ನದಿಯಿಂದ ಪವಿತ್ರ ಜಲವನ್ನು ತಂದು ರಾಜ್ಯದ ೨೫೦೦ ಶಿವ ದೇವಾಲಯಗಳಲ್ಲಿ ಗಂಗಾ ಜಲ ವಿತರಿಸಲಾಗುವುದು ಎಂದು ಅವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. 

ಸುಮಾರು ೩೦ ಸಾವಿರ ಲೀಟರ್ ಗಂಗಾ ಜಲವನ್ನು ಶಿವರಾತ್ರಿ ಹಬ್ಬದಂದು ಶಿವನ ಭಕ್ತರಿಗೆ ನೀಡಲಾಗುವುದು ಎಂದ ಅವರು ಇದಕ್ಕೆ ಸರ್ಕಾರದ ಹಣ ಬಳಸುತ್ತಿಲ್ಲ ದಾನಿಗಳ ನೆರವಿನಿಂದ ಈ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. 

ಬರುವ ಮಾರ್ಜ್ ೧೬ ರಿಂದ ರಿಯಾಯಿತಿ ದರದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ಯೋಜನೆ ಜಾರಿಮಾಡಲಾಗುತ್ತಿದ್ದು, ಇದಕ್ಕಾಗಿ ೫ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದರು. 
ಕುಕ್ಕೇ ಸುಬ್ರಮಣ್ಯ ದೇವಸ್ಥಾನದ ಅಭಿವೃದ್ಧಿಗೆ ಅನಿಮಾಸಿ ಭಾರತೀಯ ಭಕ್ತರೊಬ್ಬರು ೧ ಕೋಟಿ ರೂ. ಗಳನ್ನು ನೀಡಲು ಮುಂದೆ ಬಂದಿದ್ದಾರೆ ಎಂದರು.

Share: