ಭಟ್ಕಳ, ನವೆಂಬರ್ ೧೬: ‘ವಂದೇ ಮಾತರಂ’ನ್ನು ಕೆಲವರು ತಿರಸ್ಕರಿಸುತ್ತಿರುವುದಕ್ಕೆ ಸಚಿವ ಕಾಗೇರಿ ಖೇದ ವ್ಯಕ್ತಪಡಿಸಿದ್ದಾರೆ.
ಸಭಾಗೃಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಮಾತಿನ ಮಧ್ಯೆ ಈ ವಿಷಯವನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು ಇದೊಂದು ರಾಷ್ಟ್ರೀಯ ಭಾವನೆಯ ಕೊರತೆಯ ಧ್ಯೋತಕವಾಗಿದೆ ಎಂದು ವಿಶ್ಲೇಷಿಸಿದರು.