ಕಾರವಾರ: ಮಾರ್ಚ್ 3 ರಂದು ರಾಜ್ಯಾದ್ಯಂತ ಪಲ್ಸ ಪೊಲಿಯೋ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಎರಡು ಹನಿ ಪಲ್ಸ ಪೊಲಿಯೋ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮವು 1995 ನೇ ಇಸ್ವಿಯಿಂದ ನಿರಂತರವಾಗಿ ನಡೆಸಲಾಗುತ್ತಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ 25733 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 72740, 5 ವರ್ಷದೊಳಗಿನ ಮಕ್ಕಳನ್ನು ಗುರುತಿಸಿದ್ದು, ಪೂರ್ಣ ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರವರ ಮಾರ್ಗದರ್ಶನದಲ್ಲಿ ಆರೋಗ್ಯ ಮತ್ತು ಕು.ಕ. ಇಲಾಖೆ ಸಜ್ಜಾಗಿದೆ. ಜಿಲ್ಲೆಯ ಎಲ್ಲ ಇಲಾಖೆಗಳು ಈ ಕಾರ್ಯಕ್ಕೆ ಸಹಕಾರ ನೀಡುತ್ತಿವೆ.
ಜಿಲ್ಲೆಯಲ್ಲಿ ಒಟ್ಟು 878 ಪಲ್ಸ್ ಪೊಲಿಯೋ ಬೂತ್ ಗಳನ್ನು ನಿರ್ಮಿಸಿದ್ದು ಒಟ್ಟು 3646 ಇಲಾಖೆ ಹಾಗೂ ಇಲಾಖೇತರ ಮತ್ತು ಸ್ವಯಂ ಸೇವಾ ಸಂಸ್ಥೆಯ ಸದಸ್ಯರನ್ನು ನಿಯೋಜಿಸಲಾಗಿದೆ. ಅಭಿಯಾನದ ಮೇಲ್ವಿಚಾರಣೆಗಾಗಿ ಒಟ್ಟು 211 ಮೇಲ್ವಿಚಾರಕರನ್ನು ಹಾಗೂ ಎಲ್ಲ ತಾಲೂಕುಗಳಿಗೆ ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ವಿಶೇಷವಾಗಿ ರೋಟರಿ ಕ್ಲಬ್, ಲಯನ್ಸ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ ಹಾಗೂ ಇತರೇ ಸ್ವಯಂ ಸೇವಾ ಸಂಸ್ಥೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ. ಪಲ್ಸ ಪೊಲಿಯೋ ಅಭಿಯಾನ ಉದ್ಘಾಟನೆಯನ್ನು ಜಿಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಾಗೂ ಚುನಾಯಿತ ಪ್ರತಿನಿಧಿಗಳಿಂದ ತಾಲೂಕಾ ಮಟ್ಟದಲ್ಲಿ ಶಾಸಕರಿಂದ ಹಾಗೂ ಚುನಾಯಿತ ಪ್ರತಿನಿಧಿಗಳಿಂದ, ಗ್ರಾಮ ಪಂಚಾಯತ್ ಉಪಕೇಂದ್ರ ಮಟ್ಟದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರಿಂದ ಚಾಲನೆ ನೀಡಲು ಕ್ರಮ ವಹಿಸಲಾಗಿದೆ.
ಕಾರ್ಯಕ್ರಮದ ಪ್ರಚಾರಾರ್ಥ ಮೈಕಿಂಗ್ ವ್ಯವಸ್ಥೆ, ಬ್ಯಾನರ/ ಪೊಸ್ಟರಗಳ ಪ್ರದರ್ಶನ, ಕೇಬಲ್ ಟಿವಿ ಸ್ಕಾçಲಿಂಗ್ ಮಾಡಲಾಗಿದೆ , ಮಾರ್ಚ್ 4 ಮತ್ತು 5 ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಮಾರ್ಚ್ 4 ಮತ್ತು 5 ರಂದು ಹಾಗೂ 6 ರಂದು ನಗರ ಪ್ರದೇಶಗಳಲ್ಲಿ ತಂಡದ ಸದಸ್ಯರು ಮನೆ ಮನೆ ಭೇಟಿ ಮಾಡಿ ಲಸಿಕೆಯಿಂದ ವಂಚಿತರಾದ ಹೋದ ಮಕ್ಕಳಿಗೆ ಲಸಿಕೆ ಹಾಕಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಪೊಲಿಯೋ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಕಾಯಿಲೆಯಾಗಿದ್ದರಿಂದ ಪಾಲಕರು ಹೆಚ್ಚಿನ ಕಾಳಜಿ ವಹಿಸಿ ಮನೆ ಭೇಟಿ ಅವಕಾಶಕ್ಕಾಗಿ ಕಾಯದೇ ಮಾರ್ಚ್ 3 ರ ಭಾನುವಾರ ರಂದೇ ತಮ್ಮ ಸಮೀಪದ ಭೂತ್ ಗಳಿಗೆ 5 ವರ್ಷದೊಳಗಿನ ಮಕ್ಕಳನ್ನು ಕರೆತಂದು ಹನಿಹಾಕಿಸಿ ಪೊಲಿಯೋ ನಿರ್ಮೂಲನೆ ಮಾಡುವಲ್ಲಿ ಸಹಕರಿಸಬೇಕಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ| ನೀರಜ್ ಬಿ.ವಿ ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ನಟರಾಜ.ಕೆ. ವಿನಂತಿಸಿದ್ದಾರೆ.