ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ಅಪಘಾತ. ಶಿಕ್ಷಕ ಧಾರುಣ ಸಾವು. ಸಾರ್ವಜನಿಕರ ಆಕ್ರೋಶ.

ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ಅಪಘಾತ. ಶಿಕ್ಷಕ ಧಾರುಣ ಸಾವು. ಸಾರ್ವಜನಿಕರ ಆಕ್ರೋಶ.

Sat, 23 Dec 2023 00:16:42  Office Staff   SO News

ಕಾರವಾರ : ನಗರದ ಹಬ್ಬುವಾಡ ರಸ್ತೆಯಲ್ಲಿ ಬೈಕನಲ್ಲಿ ತೆರಳುತ್ತಿದ್ದ ಶಿಕ್ಷಕನೋರ್ವರಿಗೆ  ಟ್ರಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಉಮೇಶ ಗುನಗಿ (೫೦) ಮೃತ ಶಿಕ್ಷಕ. ಇಂದು ಬೆಳಿಗ್ಗೆ ತಮ್ಮ ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ತಮ್ಮ ಬೈಕಿನಲ್ಲಿ ದೇವಳಮಕ್ಕಿ ಶಾಲೆಗೆ ತೆರಳುತ್ತಿದ್ದರು. ಹಬ್ಬುವಾಡ ಬಳಿ ಟ್ರಕ್ ಢಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿ ಸಾವು ಕಂಡಿದ್ದಾರೆ.
ಘಟನೆ ಖಂಡಿಸಿ ಸಾರ್ವಜನಿಕರು ಸಂಬಂಧಪಟ್ಟ ಪಿಡಬ್ಲುಡಿ, ನಗರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಸಮರ್ಪಕತೆ ವಿರುದ್ದ ರಸ್ತೆ ತಡೆ ನಡೆಸಿದರು.
ಚುನಾವಣೆಗೆ ಮುನ್ನ ಕೈಗಾದಿಂದ ಕಾರವಾರ ಸಂಪರ್ಕಿಸುವ ರಸ್ತೆ ಮಾಡಲಾಗಿದೆ. ಆದರೆ ಡಿವೈಡರ್ ಮಾಡದೇ ಹಾಗೆ ಬಿಡಲಾಗಿದೆ. ಪದೇಪದೇ ಅಪಘಾತಗಳು ಸಂಭವಿಸಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿತ್ತು. ಕಾರವಾರ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Share: