ಹಾಸನ, ಡಿಸೆಂಬರ್ 17:ಬಂಡವಾಳಶಾಹಿ ಸಾಮ್ರಾಜ್ಯತ್ವವನ್ನು ನಮ್ಮ ‘ಇಚ್ಚಾ ಶಕ್ತಿ’ಯಿಂದ ವಿರೋದಿಸಿ,ದೇಶವನ್ನು ಬಡತನ ಮತ್ತು ಗುಲಾಮಗಿರಿಯಿಂದ ಮುಕ್ತಿಗೊಳಿಸುವ ಜವಾಬ್ದಾರಿ ನಾವೆಲ್ಲಾರು ಹೊರಬೇಕಾಗಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಪಕ ಮಹಮ್ಮದ್ ಕುನ್ಞಿ ಹೇಳಿದರು.
ಬುದವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ‘ಬಂಡವಾಳಶಾಹಿ ಸಾಮ್ರಾಜ್ಯತ್ವ ವಿರೋಧಿ ರಾಷ್ಟ್ರೀಯ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದವರು, ನಾವು ಮೌನವಾಗಿ ಕುಳಿತರೆ ನಮ್ಮ ಮುಂದೆ ಜಗತ್ತು ನಾಶವಾಗುವುದನ್ನು ನೋಡಬೇಕಾಗುತ್ತದೆ ಎಂದು ಹೇಳಿದರು.
ಸಕಲ ಮಾನವರಿಗೂ ಅಭಿವೃದ್ದಿ ಪ್ರಯೋಜನಗಳು ಸಿಗುವಂತೆ ಆಗಬೇಕು. ಬಡತನ, ಹಸಿವು, ಅನಾರೋಗ್ಯ ಮತ್ತು ಅಜ್ಙಾನ ಅಳಿಯ ಬೇಕು. ನಮ್ಮ ದೇಶ ಪ್ರಗತಿ ಮತ್ತು ಸುಬಿಕ್ಷೆಯೋಂದಿಗೆ ಸಮಾನತೆ ಮತ್ತು ನ್ಯಾಯಕ್ಕೆ ಮಾದರಿಯಾಗಬೇಕು. ಇಡಿ ಜಗತ್ತಿಗೆ ಮಾದರಿ ಕಲ್ಯಾಣದ ಪರಿಪೂರ್ಣ ಅದರ್ಶವಾಗಿ ಮೆರೆಯಬೇಕೆಂಬುದೇ ನಮ್ಮ ಅಭಿಯಾನದ ಅಭಿಲಾಷೆಯಾಗಿದೆ ಎಂದರು.
ಚಿಂತಕ ಹಾಗೂ ಉಪನ್ಯಾಸಕ ಮಲ್ಲೇಶ್‌ಗೌಡ ಮತಾನಾಡಿ, ಬಂಡವಾಳಶಾಹಿ ಸಾಮ್ರಾಜ್ಯತ್ವವನ್ನು ಹಿಮ್ಮೇಟಿಸಲು ಸ್ವದೇಶಿ ವಸ್ತುಗಳ ಬಳಕೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಅನಾಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ವಿದೇಶಿ ಕಂಪನಿಗಳ ಪ್ರಚಾರಕ್ಕೆ ಮಾರುಹೋಗಿ ಆ ಬಳಸುವುದರಿಂದ ಲಾಭ ಪಡೆದ ಕಂಪನಿ ನಮ್ಮದೆ ಆದ ಸಣ್ಣ ಹಾಗೂ ಗುಡಿ
ಕೈಗಾರಕೆಯ ಅವನತಿಗೆ ವಿನಿಯೋಗಿಸುತ್ತಾರೆ ಈ ಮೂಲಕ ನಮ್ಮನ್ನು ಶೋಷಣೆಗೆ ಒಳಪಡಿಸುತ್ತಾರೆ ಎಂದರು.
ಉಪನ್ಯಾಸಕ ವೇಣುಗೋಪಾಲ್ ಮಾತನಾಡಿ, ನಮ್ಮ ಕನಸುಗಳನ್ನು ಖರೀದಿಸಿ ಗುಲಾಮರಾನ್ನಾಗಿಸಿವುದರ ಮೂಲಕ ಸಮ್ರಾಜ್ಯಶಾಹಿ ವ್ಯವಸ್ಥೆ ನಮ್ಮ ದೇಶದ ಹಲವು ಪ್ರತಿಭೆಯನ್ನ ವಿದೇಶಿಯರು ಬಳಸಿಕೊಳ್ಳುತ್ತಿದ್ದಾರೆಂದರು.