ಸಕಲೇಶಪುರ, ಡಿಸೆಂಬರ್ ೮: ರಾಜ್ಯದ ಬಿ.ಜೆ.ಪಿ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರಸ್ ಸಮಿತಿ ಕರೆ ನೀಡಿದ ಪ್ರತಿಭಟನೆ ಮೇರೆಗೆ ಸಕಲೇಶಪುರ ತಾಲೂಕು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮಂಗಳವಾರ ರಾಜ್ಯ ಸರಕಾರದ ಆಡಳಿತ ವೈಪಲ್ಯ, ಸ್ಥಳೀಯ ಆಡಳಿತದಲ್ಲಿ ನಡೆಯುತ್ತಿರುವ ಭ್ರಷ್ಟಚಾರ ಹಾಗೂ ಶಾಸಕರ ಜನವಿರೋಧಿನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಕಾಂತರಾಜ್. ಡಿ.ಸಿ.ಸಣ್ಣಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಂದರಮ್ಮ. ಉಪಾಧ್ಯಕ್ಷ ಮನ್ಸೂರ್, ಯುವ ಘಟಕದ ಅಧ್ಯಕ್ಷ ಹೆಗ್ಗೂವೆ ಸಂಜಯ್. ಎಸ್ಸಿ.ಎಸ್ಟಿ ಘಟಕದ ತಾಲ್ಲೂಕು ಅಧ್ಯಕ್ಷ ದೂಡ್ಡಿರಯ್ಯ. ಲಿಂಗರಾಜ್, ದೇವರಾಜ್. ತುಳುಸಿಪ್ರಸಾದ್ ಮುಂತಾದವರಿದ್ದರು.