ಕರಾಚಿ/ಇಸ್ಲಾಮಾಬಾದ್ (ಪಿಟಿಐ): ಕರಾಚಿಯಲ್ಲಿ ಬಿಗಿ ಭದ್ರತೆಯಲ್ಲಿ ಸಾವಿರಾರು ಮುಸ್ಲಿಮರು ಮೊಹರಂ ಮೆರವಣಿಗೆಯಲ್ಲಿ ತೊಡಗಿದ್ದಂತೆಯೇ ಶಕ್ತಿಶಾಲಿ ಬಾಂಬೊಂದು ಸ್ಫೋಟಿಸಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಮತ್ತು ಇತರ 60 ಜನರು ಗಾಯಗೊಂಡಿದ್ದಾರೆ.
ಶಿಯಾ ಮುಸ್ಲಿಮರ ಪಾಲಿಗೆ ಮೊಹರಂ ಅತ್ಯಂತ ಪವಿತ್ರ ಹಬ್ಬ. ಇದನ್ನು ಹಾಳುಗೆಡುವ ಸಲುವಾ ಗಿ ಉಗ್ರರು ಈ ದುಷ್ಕೃತ್ಯ ಎಸಗಿದ್ದ ಸ್ಪಷ್ಟವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಭಾನುವಾರ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ಮತ್ತು ಕರಾಚಿಗಳಲ್ಲಿ ಆತ್ಮಹತ್ಯಾ ದಾಳಿ ಗಳನ್ನು ನಡೆಸಿದ್ದರು. ಘಟನೆಯಲ್ಲಿ 8 ಮಂದಿ ಸತ್ತಿದ್ದರು.
ಮೆರವಣಿಗೆ ತೆರಳುತ್ತಿದ್ದ ಪ್ರದೇಶ ದಲ್ಲಿ ಪೊಲೀಸರು ಮತ್ತು ಭದ್ರತಾಪಡೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರೂ ಸ್ಫೋಟ ನಡೆಯುವುದನ್ನು ತಪ್ಪಿಸಲಾಗಲಿಲ್ಲ.
ಮೂರು ದಿನಗಳಲ್ಲಿ ಈ ಜನಾಂಗದ ಮೇಲೆ 3 ಸ್ಫೋಟಗಳು ನಡೆದಿವೆ.
22 ಸಾವು: ಪಾಕಿಸ್ತಾನದ ವಾಯವ್ಯ ಭಾಗದ ಬುಡಕಟ್ಟು ಪ್ರದೇಶದಲ್ಲಿ ಬುಡಕಟ್ಟು ಜನರು ಮತ್ತು ತಾಲಿಬಾನ್ ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 22 ಮಂದಿ ಉಗ್ರರ ಸಹಿತ 33 ಮಂದಿ ಸತ್ತಿದ್ದು, 3 ಉಗ್ರರನ್ನು ಬಂಧಿಸಲಾಗಿದೆ.
ವಾಯವ್ಯ ಪಾಕಿಸ್ತಾನ ಭಾಗದಲ್ಲಿನ ಒರಕ್ಸೈನ ಸ್ಟೋರಿಖೇಲ್ ಭಾಗದಲ್ಲಿ ಬುಡಕಟ್ಟು ಜನರು ಕಟ್ಟಿದ್ದ ಮನೆಗಳು ಮತ್ತು ಕಂದಕಗಳ ಮೇಲೆ ತಾಲಿಬಾನ್‌ಗಳು ದಾಳಿ ನಡೆಸಿದಾಗ ಉಗ್ರ ಸ್ವರೂ ಪದ ಕಾಳಗ ಆರಂಭವಾಗಿತ್ತು. ಸತ್ತವರಲ್ಲಿ ಸ್ಥಳೀಯ ಬುಡಕಟ್ಟು ನಾಯಕ ಮಲಿಕ್ ಷರೀಫ್ ಸಹ ಸೇರಿದ್ದಾನೆ. ಉಗ್ರರು ಆತನ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದಾಗ ಕಾಳಗ ಆರಂಭವಾಗಿತ್ತು. 2 ಕಡೆಯಲ್ಲೂ ಭಾರಿ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು.
ವಜಿರಿಸ್ತಾನದಲ್ಲಿ ತಾಲಿಬಾನ್ ಉಗ್ರರು ಬೊಯಾ ನರಾಯ್ ನೆಲೆಯ ಮೇಲೆ ದಾಳಿ ನಡೆಸಿದ್ದ ರಿಂದ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದವು. ಘಟನೆಯಲ್ಲಿ 15 ಉಗ್ರರು ಮತ್ತು ಇಬ್ಬರು ಯೋಧರು ಸತ್ತಿದ್ದಾರೆ.
ಸೌಜನ್ಯ: ಪ್ರಜಾವಾಣಿ