ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಣ್ಮರೆಯಾಗಿದ್ದ ಚಾಲಕ ಅರ್ಜುನ್ ಮತ್ತು ಟ್ರಕ್ ಪತ್ತೆ

ಕಣ್ಮರೆಯಾಗಿದ್ದ ಚಾಲಕ ಅರ್ಜುನ್ ಮತ್ತು ಟ್ರಕ್ ಪತ್ತೆ

Thu, 26 Sep 2024 16:18:41  Office Staff   SO News

ಅಂಕೋಲಾ : ಸತತ ಕಾರ್ಯಾಚರಣೆಯಿಂದಾಗಿ ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಭಾರತ್ ಬೆಂಜ್ ಟ್ರಕ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜುಲೈ 16ರಂದು  ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ವಾಹನಗಳು ಮತ್ತು ಮೂವರು ನಾಪತ್ತೆಯಾಗಿದ್ದರು. ದುರಂತದಲ್ಲಿ ಒಟ್ಟು 11 ಜನರು ಮೃತರಾಗಿದ್ದರು.  ಕೇರಳ ಮೂಲದ ಅರ್ಜುನ್ , ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ ಮೃತದೇಹಕ್ಕಾಗಿ ಶೋಧ ನಡೆಸಿದ್ದರು.

ಕೇರಳ ರಾಜ್ಯದ ಚಾಲಕ ಅರ್ಜುನ್ ಇರುವಂತ ಭಾರತ್ ಬೆಂಜ್ ಟ್ರಕ್ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಹೀಗಾಗಿ ಯಂತ್ರಗಳ ಮೂಲಕ ಶೋಧ ಮುಂದುವರಿಸಲಾಗಿತ್ತು. ಸಂಬಂಧಪಟ್ಟ ಗುತ್ತಿಗೆ ತಂಡ ಭಾರತ್ ಬೆಂಜ್ ವಾಹನ ಮತ್ತು ಅದರೊಳಗಿದ್ದ ಅರ್ಜುನ್ ಮೃತದೇಹ ಹೊರ ತೆಗೆದಿದೆ. ಸುಮಾರು 70 ದಿನಗಳ ಬಳಿಕ ಅರ್ಜುನ್ ಮತ್ತು ಟ್ರಕ್ ಪತ್ತೆ ಮಾಡಲಾಗಿದೆ. ಕಾರವಾರ ಶಾಸಕ ಸತೀಶ್ ಸೈಲ್ ಅವರ ವಿಶೇಷ ಆಸಕ್ತಿಯಿಂದ ಜಿಲ್ಲಾಡಳಿತ ಶೋಧ ಕಾರ್ಯ ನಡೆಸುತ್ತಿದೆ.


Share: