ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ:೮ ಜನರು ಗಾಯ

ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ:೮ ಜನರು ಗಾಯ

Tue, 31 Oct 2023 06:22:20  Office Staff   SO News

ಭಟ್ಕಳ: ಪಟ್ಟಣದ ಭೈಪಾಸ್ ಬಳಿಯಲ್ಲಿ ಸೋಮವಾರ ನಸುಕಿನ ಜಾವ ಎರಡು ವಾಹನಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಎರಡು ವಾಹನದಲ್ಲಿದ್ದ ೮ ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

 ಸೋಮವಾರ ನಸುಕಿನ ಜಾವ ಭಟ್ಕಳದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೋವಾ, ಕುಂದಾಪುರದಿದ ಭಟ್ಕಳದ ಕಡೆಗೆ ಬರುತ್ತಿದ್ದ ಕ್ರೂಸರ್ ನಡುವೆ ಅಪಘಾತ  ನಡೆದಿದೆ ಇನ್ನೊವಾ ಕಾರಿನಲ್ಲಿದ್ದ ಗಜೇಂದ್ರಗಡ, ಗದಗ ನಿವಾಸಿ ರೇಷ್ಮಾ ರಾತೋಡ, ಮಾರುತಿ ನಾಗಪ್ಪ ಅಜಮೀರ ಹಾಗೂ ಕ್ರೂಸರನಲ್ಲಿದ್ದ ಬೀಮನಗೌಡ, ಮುನೀರಾ ಫಯಾಜ್, ಮಂದಾಕಿನಿ ಬಳೆಗಾರ, ಅನಸೂಯ ಉಪಾಸಿ, ಬಸವರಾಜ ಪೂಜಾರಿ, ಕಾಡಪ್ಪ ಉಪಾಸಿ ಗಾಯಗೊಂಡವರು. ಈ ಕುರಿತು ಇನ್ನೊವಾ ಚಾಲಕ ಮಾರುತಿ ನಾಗಪ್ಪ ಅಜಮೀರ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Share: