ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಸಮರ್ಪಕ ಕಾಮಗಾರಿ - ಸಾರ್ವಜನಕರಿಗೆ ತೊಂದರೆ

ಭಟ್ಕಳ: ಅಸಮರ್ಪಕ ಕಾಮಗಾರಿ - ಸಾರ್ವಜನಕರಿಗೆ ತೊಂದರೆ

Wed, 14 Oct 2009 21:15:00  Office Staff   S.O. News Service
ಭಟ್ಕಳ, ಅಕ್ಟೋಬರ್ 12:  ಭಟ್ಕಳದಲ್ಲಿ ಕೋಟ್ಯಾಂತರ ರೂ ಗಳನ್ನು ವೆಚ್ಚಮಾಡಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದು ಕೆಲವೊಂದು ಕಡೆಗಳಲ್ಲಿ ಕಾಮಗಾರಿಯು ಸಮರ್ಪಕವಾಗಿ ನಡೆಯದೆ ಹಲವಾರು ಅವಾಂತಗಳನ್ನು ಸೃಷ್ಟಿ ಮಾಡಿದ್ದು ಈಗ ಸಾರ್ವಜನಿಕರು ಇದರಿಂದ ತೊಂದರೆಗೊಳಗಾಗಬೇಕಾಗಿ ಬಂದಿದೆ.
 13bkl2.jpg
13bkl3.jpg 
ಇಲ್ಲಿನ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡ ರಸ್ತೆಯೇನೋ ಉತ್ತಮವಾಗಿಯೇ ಇದೆ ಆದರೆ ಅದು ಸಮರ್ಪಕವಾಗಿಲ್ಲ. ಆದ್ದರಿಂದ ರಸ್ತೆಯ ಪಕ್ಕದಲ್ಲಿರುವ ಒಳಚರಂಡಿ ಗಟಾರದ ನೀರು ಈಗ ರಸ್ತೆಯ ಮೇಲೆ ಕಾರಂಜಿ ಹಾಗೆ ಚಿಮ್ಮುತ್ತಿದ್ದು ರಸ್ತೆಯಲ್ಲಿ ಹೋಗುವವರು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರಂತವೆಂದರೆ ಇದು ಇಲ್ಲಿನ ಪುರಸಭೆ ಕಛೇರಿಯ ಹತ್ತಿರವೇ ಇದ್ದು ಯಾವುದೇ ಅಧಿಕಾರ್ರಿಗ್ ಕಣ್ಣೀಗೆ ಬೀಳದಿರುವ ಬಗ್ಗೆ ಸಾರ್ವಜನಿಕರು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

Share: