ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉದ್ಯಮಿ ಕೊಲೆಯ ಪ್ರಮುಖ ಆರೋಪಿ ಆತ್ಮಹತ್ಯೆ

ಉದ್ಯಮಿ ಕೊಲೆಯ ಪ್ರಮುಖ ಆರೋಪಿ ಆತ್ಮಹತ್ಯೆ

Thu, 26 Sep 2024 16:30:23  Office Staff   SO News

ಕಾರವಾರ: ತಾಲೂಕಿನ ಹಣಕೋಣ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧಿಸಿದ್ದಂತೆ ಪ್ರಮುಖ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಳಗಾ ಗ್ರಾಮ ಮೂಲದ ಸದ್ಯ ಗೋವಾದಲ್ಲಿ ನೆಲೆಸಿದ್ದ ಉದ್ಯಮಿ ಗುರುಪ್ರಸಾದ್ ರಾಣೆ ಆತ್ಮಹತ್ಯೆ ಮಾಡಿಕೊಂಡಾತ.  ತನ್ನ ಕಾರನ್ನ ನಿಲ್ಲಿಸಿ ಮಾಂಡೋವಿ ನದಿಗೆ ಹಾರಿ ಗುರುಪ್ರಸಾದ್ ರಾಣೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ಭಾನುವಾರ  ಹಣಕೋಣದಲ್ಲಿ ಪೂನಾದಲ್ಲಿ ಉದ್ಯಮಿಯಾಗಿದ್ದ ವಿನಾಯಕ ನಾಯ್ಕನನ್ನ ತಲ್ವಾ‌ರ್ ನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನ ಪೊಲೀಸರು ನಡೆಸುತ್ತಿದ್ದರು.

ಗುರುಪ್ರಸಾದ ರಾಣೆ ಎಂಬುವವರೇ ಈ ಕೊಲೆ ಮಾಡಿಸಿರೋದು ಗೊತ್ತಾಗಿತ್ತು. ಹೀಗಾಗಿ ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋವಾದ ಪರವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: