ಭಟ್ಕಳ: 78ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಇಂಡಿಯನ್ ನವಾಯತ್ ಫೋರಂ ವತಿಯಿಂದ ಭಟ್ಕಳದ ವಿವಿಧ ಶಾಲೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಶಾಲಾ ಬ್ಯಾಗ್ ಗಳನ್ನು ಗುರುವಾರ ವಿತರಿಸಲಾಯಿತು.
ಭಟ್ಕಳದ ಅಂಜುಮನ್, ಜಾಮಿಯಾ ಇಸ್ಲಾಮಿಯಾ, ನ್ಯೂ ಶಮ್ಸ್ ಹಾಗೂ ಅಲಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಗೆ ಒಟ್ಟು ೧೦೦೦ ಶಾಲಾ ಬ್ಯಾಗ್ ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಎಸ್.ಎಂ. ಅರ್ಷದ್ ಮೋಹತೆಶಮ್, ತನ್ವೀರ್ ಮೋಟಿಯಾ, ದಾವೂದ್ ಖಲೀಫಾ, ಅಬ್ದುಲ್ ಸಲಾಂ ದಾಮ್ದಾ, ತಲ್ಹಾ ಅಕ್ರಮಿ ಮತ್ತು ಅರ್ಮಾರ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಲ್ಲಿ ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಅಲಿ ಪಬ್ಲಿಕ್ ಶಾಲೆಯಲ್ಲಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ, ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಕ್ಷ ಮುಹಮ್ಮದ್ ಯುನೂಸ್ ಕಾಝಿಯಾ ಹಾಗೂ ನ್ಯೂ ಶಮ್ಸ್ ಶಾಲೆಯಲ್ಲಿ ಉಪಾಧ್ಯಕ್ಷ ಸೈಯ್ಯದ್ ಖುತುಬ್ ಬರ್ಮಾವರ್ ಶಾಲಾ ಬ್ಯಾಗ್ ಗಳನ್ನು ಸ್ವೀಕರಿಸಿದರು.