ಬೆಂಗಳೂರು, ಸೆ. 28: ವೇತನ ಭತ್ಯೆ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರಕ್ಕೆ ಸೆ.೨೮ರವರೆಗೆ ಗಡುವು ನೀಡಿದ್ದ ಸರಕಾರಿ ವೈದ್ಯರು, ಮಂಗಳವಾರ ಸಾಮೂಹಿಕ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.
ತಮ್ಮಗೆ ಲಭಿಸುತ್ತಿರುವ ಮೂಲವೇತನಕೆ ಶೇ.೭೦ರಷ್ಟು ವೇತನ ಭತ್ಯೆಯನ್ನು ಹೆಚ್ಚಿಸಬೇಕೆಂಬ ತಮ್ಮ ಬೇಡಿಕೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿರುವುದರಿಂದ ವೈದ್ಯರು ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರಂದ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರ ಸಾಮೂಹಿಕ ರಾಜೀನಾಮೆಯಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿನ ಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ೪೧೯೯ ವೈದ್ಯರು ಮಂಗಳವಾರ ಬೆಳಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಉಷಾ ವಾಸಂಕರ್ರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಸರಕಾರ ನಮ್ಮ ವೇತನ ಭತ್ಯೆಯನ್ನು ಶೇ.೨೦ರಷ್ಟು ಮಾತ್ರ ಹೆಚ್ಚಿಸಿದೆ. ಆದರೆ ಕಾಲಮಿತಿ ಬಡ್ತಿ, ಗುತ್ತಿಗೆ ಅವಧಿಯನ್ನು ಸ್ನಾತಕೋತ್ತರ ಪದವಿಗೂ ಪರಿಗಣಿಸುವುದು ಮತ್ತು ಸಂಬಳ ಹೆಚ್ಚಳದ ಬೇಡಿಕೆಗೆ ಇನ್ನೂ ಸ್ಪಂದಿಸಿಲ್ಲ. ಹಾಗಾಗಿ ಸಾಮೂಹಿಕ ರಾಜೀನಾಮೆ ಅನಿವಾರ್ಯವಾಗಿದೆ ಎಂದು ರಂದ್ರ ಹೇಳಿದರು.
ಸಾಮೂಹಿಕ ರಾಜೀನಾಮೆಯ ನಂತರವು ಕರ್ತವ್ಯಕ್ಕೆ ಮರಳಲಿರುವ ವೈದ್ಯರು ತಮ್ಮ ರಾಜೀನಾಮೆಯ ಅಂUಕಾರಕ್ಕಾಗಿ ರಾಜ್ಯ ಸರಕಾರಕ್ಕೆ ಹದಿನೈದು ದಿನಗಳ ಕಾಲಾವಕಾಶ ನೀಡಲಿದ್ದಾರೆ. ಈ ಅವಧಿಯಲ್ಲಿಯೂ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಕೆಲಸಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ಅವರು ತಿಳಿಸಿದರು.