ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಗ್ರಾಮ ಪಂಚಾಯತಿಗೆ ಪಕ್ಷರಹಿತ ಚುನಾವಣೆ ಕಾನೂನು ಉಲ್ಲಂಘಿಸಿದಂತೆ ಪಕ್ಷಗಳಿಗೆ ಎಚ್ಚರಿಕೆ

ಗ್ರಾಮ ಪಂಚಾಯತಿಗೆ ಪಕ್ಷರಹಿತ ಚುನಾವಣೆ ಕಾನೂನು ಉಲ್ಲಂಘಿಸಿದಂತೆ ಪಕ್ಷಗಳಿಗೆ ಎಚ್ಚರಿಕೆ

Fri, 30 Apr 2010 13:57:00  Office Staff   S.O. News Service
ಗ್ರಾಮ ಪಂಚಾಯತಿಗೆ ಪಕ್ಷರಹಿತ ಚುನಾವಣೆ ಕಾನೂನು ಉಲ್ಲಂಘಿಸಿದಂತೆ ಪಕ್ಷಗಳಿಗೆ ಎಚ್ಚರಿಕೆ 


ಬೆಂಗಳೂರು, ಏಪ್ರಿಲ್ ೩೦ : (ಕರ್ನಾಟಕ ವಾರ್ತೆ) -  ಕರ್ನಾಟಕ  ಪಂಚಾಯತ್ ರಾಜ್ ಅಧಿನಿಯಮ ೧೯೯೩ ರ  ಪ್ರಕಾರ ಗ್ರಾಮಪಂಚಾಯತ್ ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದು ಈ ಕಾನೂನನ್ನು ಉಲ್ಲಂಘಿಸದಂತೆ ರಾಜ್ಯ ಚುನಾವಣಾ ಆಯೋಗವು ಎಚ್ಚರಿಸಿದೆ.  

ಗ್ರಾಮಪಂಚಾಯತ್ ಚುನಾವಣೆಗಳು ಪಕ್ಷರಹಿತವಾಗಿ ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ, ಸಭೆ ಸಮಾರಂಭಗಳನ್ನು ನಡೆಸಲಾಗುತ್ತಿದೆ ಎಂದು, ಸ್ಥಳೀಯ ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ.  ಈ ಹಿನ್ನೆಲೆಯಲ್ಲಿ ಗ್ರಾಮಪಂಚಾಯತ್ ಚುನಾವಣೆಗಳಿಗೆ ರಾಜಕೀಯ ನಾಯಕರ ಭಾವಚಿತ್ರ, ಪಕ್ಷಗಳ ಚಿಹ್ನೆ, ಬಾವುಟ ಇತ್ಯಾದಿ ಬಳಸಿ ಪ್ರಚಾರ ಮಾಡುವುದು ಕಂಡುಬಂದಲ್ಲಿ ಅಂತಹ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ/ರಿಟರ್ನಿಂಗ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.


Share: