ಕಾರವಾರ: ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಂಗಾವಳಿ ನದಿಯ ನೀರಿನ ಸೆಳೆತ ಹೆಚ್ಚಾಗಿ ದ್ದರಿಂದ ನದಿ ನೀರಿನಲ್ಲಿ ಮುಳುಗಡೆ ಯಾಗಿದೆ ಎನ್ನಲಾದ ಕೇರಳ ಮೂಲದ ಅರ್ಜುನ್, ಸ್ಥಳೀಯರಿ ಬ್ಬರು ಹಾಗೂ ಲಾರಿ ಪತ್ತೆ ಕಾರ್ಯ ನಡೆಸಲು ಸಾಧ್ಯ ವಾಗುತ್ತಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ರವಿವಾರ ಶಿರೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಇಂದಿಗೆ 13 ದಿನ ಗಳಾಗಿವೆ. ಸದ್ಯಕ್ಕೆ ಏನೂ ಮಾಡಲಾಗದ ಪರಿಸ್ಥಿತಿ ಇರುವುದರಿಂದ ನದಿಯ ನೀರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಸ್ಥಗಿ ತಗೊಳಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಕಾರ್ಯಾಚರಣೆಯನ್ನು ಉಳಿದ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವರು ತಿಳಿಸಿದರು.
ಗಂಗಾವಳಿ ನದಿಯ ಮೂರು ಸ್ಥಳಗಳಲ್ಲಿ ಡೈವಿಂಗ್ ಮಾಡಿದ್ದ ಈಶ್ವರ್ ಮಲ್ಪೆ ತಂಡ ನದಿಯಲ್ಲಿ ಬೃಹದಾಕಾರದ ಬಂಡೆಗಳು, ಮರದ ತುಂಡುಗಳು ಹಾಗೂ ಹೈಟೆನ್ಷನ್ ವಿದ್ಯುತ್ ತಂತಿಗಳು ಇರುವುದಾಗಿ ತಿಳಿಸಿತ್ತು. ನದಿಯ ಹರಿವು ಕೂಡ ಹೆಚ್ಚಿದ್ದು ನೀರಿನೊಳಗೆ ಏನೂ ಕಾಣಿಸದ ಪರಿಸ್ಥಿತಿ ಇರುವುದರಿಂದಾಗಿ ಕಾರ್ಯಾಚರಣೆ ಅಡ್ಡಿಯಾಗುತ್ತಿದೆ ಎಂದಿದ್ದರು. ಎನ್ಡಿಆರ್ಎಫ್ನ ಡೈವರ್ ನೊಂದಿಗೆ ಈಶ್ವರ್ ಮಲ್ಪೆ ಡೈವ್ ಮಾಡಿದ್ದು, ಈ ವೇಳೆ 300 ಮೀಟರ್ ಆಳದವರೆಗೆ ಇಳಿದರೂ ಕೇವಲ ಮರ, ಕಲ್ಲುಗಳೇ ಕಂಡು ಬಂದಿವೆ. ಲಾರಿಯ ಸುಳಿವು ಸಿಗದೆ ಡೈವಿಂಗ್ ತಂಡ ವಾಪಸಾಗಿದೆ. ಈ ಕಾರ್ಯಾಚರಣೆ ವಿಫಲವಾಗಿದ್ದರಿಂದಾಗಿ ಸದ್ಯಕ್ಕೆ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. *ಕೆ.ಲಕ್ಷ್ಮಿ ಪ್ರಿಯಾ, ಉತ್ತರ ಕನ್ನಡ ಜಿಲ್ಲಾಧಿಕಾರಿ* |
ಕಾರ್ಯಾಚರಣೆ ನಿಲ್ಲಿಸುತ್ತಿಲ್ಲ. ಆದರೆ, ಸದ್ಯ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಕಾಣೆಯಾಗಿ ರುವವರು ಪತ್ತೆಯಾಗದೇ ಇರುವುದು ದುಃಖದ ಸಂಗತಿ. ಮಳೆ ಇಳಿಮುಖವಾಗಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಪತ್ತೆ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಮಾತನಾಡಿ, ದುರ್ಘಟನೆ ಸಂಭವಿಸಿ 13 ದಿನಗಳು ಕಳೆದಿದ್ದು, ಅವಘಡದಲ್ಲಿ ಕಣ್ಮರೆಯಾಗಿರುವ 11 ಮಂದಿಯ ಪೈಕಿ ಇದುವರೆಗೆ 8 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿ ರುವ ಕೇರಳದ ಲಾರಿ ಹಾಗೂ ಇನ್ನೂ ಮೂವರು ಗಂಗಾವಳಿ ನದಿಯಲ್ಲೇ ಇರುವ ಶಂಕೆಯಿದ್ದು, ಕಳೆದ 3-4 ದಿನಗಳಿಂದ ನದಿಯಲ್ಲಿ ಶೋಧ ನಡೆಸಲಾಗಿತ್ತು. ಉಡುಪಿಯ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿತ್ತು. ಡೋನ್ ಸ್ಕ್ಯಾನಿಂಗ್ ನಲ್ಲಿ ನೀಡಲಾಗಿದ್ದ ನಾಲ್ಕು ಜಾಗಗಳಲ್ಲಿ ಶೋಧ ನಡೆಸಿದರೂ ಯಾವ ಸುಳಿವೂ ಲಭಿಸದ ಕಾರಣ ಕಾರ್ಯಾಚರಣೆ ಸ್ಥಗಿ ತಗೊಳಿಸಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೌಕಾನೆಲೆ, ಆರ್ಮಿ, ಪೊಲೀಸ್ ಸೇರಿ ದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.