ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಕೋಲಾದಲ್ಲಿ ಕಾರು ಪಲ್ಟಿ. ಚಾಲಕ ಸಾವು. ಇನ್ನೋರ್ವ ಗಂಭೀರ

ಅಂಕೋಲಾದಲ್ಲಿ ಕಾರು ಪಲ್ಟಿ. ಚಾಲಕ ಸಾವು. ಇನ್ನೋರ್ವ ಗಂಭೀರ

Sun, 24 Nov 2024 20:48:16  Office Staff   SO News

ಅಂಕೋಲಾ :  ಜಾನುವಾರು ತಪ್ಪಿಸಲು ಹೋಗಿ  ಕಾರೊಂದು ನಿಯಂತ್ರಣ ತಪ್ಪಿ ಚಾಲಕ  ಸಾವನ್ನಪ್ಪಿದ ಘಟನೆ   ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಸಂಭವಿಸಿದೆ.

ಹೊನ್ನಾವರದ ಹರೀಶ ನಾಯ್ಕ (25) ಎಂಬಾತ ಸ್ಥಳದಲ್ಲೆ‌ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ  ದಿನೇಶ ಎಂಬಾತ ಗಾಯಗೊಂಡಿದ್ದು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೊನ್ನಾವರದಿಂದ ಅಂಕೋಲಾ ಕಡೆ ಕಾರು ತೆರಳುತಿತ್ತು. ಹರೀಶ್ ಚಾಲನೆ ಮಾಡುತ್ತಿದ್ದಾರೆನ್ನಲಾಗಿದೆ.  ಕೊಡಸಣಿ ಕ್ರಾಸ್ ಬಳಿ  ಜಾನುವಾರು ಎದುರಿಗೆ ಬಂದಾಗ ಕಾರು ನಿಯಂತ್ರಣ ತಪ್ಪಿ  ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ. ಪರಿಣಾಮ ಚಾಲಕ ಕಾರಿನಿಂದ ಕೆಳಕ್ಕೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: