ಚಿಕ್ಕಬಳ್ಳಾಪುರ, ನವೆಂಬರ್ ೧೨: ಆಲೂಗಡ್ಡೆಯಲ್ಲಿ ಕಂಡುಬರುವ ಅಂಗಮಾರಿ ರೋಗವನ್ನು ನಿಯಂತ್ರಿಸಲು ಅನುಸರಿಸಬೇಕಾದ ಮುಂಜಾಗೃತ ಕ್ರಮಗಳು.
ಅಂಗಮಾರಿ ರೋಗವು ವಾತಾವರಣದಲ್ಲಿ ತೇವಾಂಶ ಶೇಕಡ ೯೦ ಮತ್ತು ಉಷ್ಣಾಂಶ (೮-೧೦ ಡಿಗ್ರಿ ಸೆಲ್ಸಿಯಸ್) ೮-೧೦ ದಿನಗಳ ತನಕ ನಿರಂತರವಾಗಿ ಇದ್ದಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಮಳೆಗಾಲ ಹಾಗೂ ಚಳಿಗಾಲದ ಎರಡೂ ಬೆಳೆಗಳನ್ನು ಈ ರೋಗವು ಬಾದಿಸುತ್ತದೆ.
ರೋಗದ ಲಕ್ಷಣಗಳು:
ಎಲೆಗಳ ಕೆಳಭಾಗದಲ್ಲಿನ ಎಲೆಯ ತುದಿ ಅಂಚಿನಲ್ಲಿ ಮತ್ತು ಕಾಂಡಗಳ ಮೇಲೆ ನೀರಿನಿಂದ ತೊಯ್ದಂತಿರುವ ಚುಕ್ಕೆಗಳು ಕಾಣಿಸುತ್ತದೆ. ಈ ಚುಕ್ಕೆಗಳು ಕ್ರಮೇಣ ವೃದ್ದಿಯಾಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಭಾಗದಲ್ಲಿ ವೃತ್ತಾಕಾರದ ಗೀರುಗಳು ಮತ್ತು ಬಿಳಿ ಬೂನ್ನು ಬೆಳವಣಿಗೆ ಕಂಡು ಬರುತ್ತದೆ.
ನಿಯಂತ್ರಣ ಕ್ರಮಗಳು ಅಂಗಮಾರಿ ರೋಗದ ನಿರ್ವಾಹಣೆಗೆ ಪ್ರತಿ ಲೀಟರ್ ನೀರಿಗೆ ೨ ಗ್ರಾಂ ಜೈನೆಬ್ ಹಾಗೂ ಕೊನೆ ಅಂಗಮಾರಿ ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ೨ ಗ್ರಾಂ ಮ್ಯಾಂಕೋಜೆಬ್ ಅಥವಾ ೨ ಗ್ರಾಮಂ ಕ್ಲೋರೋಥೆಲೋನಿಲ್ (ಕವಾಚ್)ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ನಂತರವೂ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ ೨ ಗ್ರಾಂ ರೆಡೋಮಿಲ್ (ಮೆಟಲಾಕ್ಸಿಲ್+ಮ್ಯಾಂಕೋಜೆಬ್) ಬೆರೆಸಿ ಸಿಂಪಡಿಸಬೇಕು. ಈಗಾಗಲೇ ಅಂಗಮಾರಿ ರೋಗದ ಹತೋಟಿಗೆ ರಿಡೋಮಿಲ್ ಸಿಂಪರಣೆ ಮಾಡಿದ್ದಲ್ಲಿ ಈ ಶಿಲೀಂದ್ರನಾಶಕವನ್ನು ಮತ್ತೆ ಸಿಂಪಡಿಸಬಾರದು. ಬದಲಿಗೆ ಪ್ರತಿ ಲೀಟರ್ ನೀರಿಗೆ ೨ ಗ್ರಾಂ ಕರ್‌ಜೆಟ್‌ಯನ್ನು ಬೆರೆಸಿ ಸಿಂಪಡಿಸಬೇಕು. ಮತ್ತೆ ರೋಗ ಉಲ್ಬಣಿಸಿದರೆ ಪತ್ರಿ ಲೀಟರ್ ನೀರಿಗೆ ೧ ಗ್ರಾಂ ಡೈಮಿಥೋಮಾರ್ಪ್ (ಆಕ್ರೋಬ್ಯಟ್) ಜತೆಗೆ ೨ ಗ್ರಾಂ ಮೆಟರ್‍ಯಾಂ (ಪಾಲಿರ್‍ಯಾಮ್ ಸ್ಯಾನೆಟ್) ಸೇರಿಸಿ ಸಿಂಪಡಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪ ನಿರ್ದೇಶಕರು ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.