ಬೆಂಗಳೂರು ಮಾ ೧೫ (ಕರ್ನಾಟಕ ವಾರ್ತೆ) - ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ಮಾರ್ಚ್ ೨೮ ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳ ಬಗ್ಗೆ ದೂರು ಸ್ವೀಕರಿಸಲು ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಸಂಬಂಧ, ಅಬಕಾರಿ, ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಮಾಹಿತಿಗಳನ್ನು ಬೆಂಗಳೂರು ಅಬಕಾರಿ ಉಪ ಆಯುಕ್ತರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ನಂ ೨೨, ಪೂರ್ಣಿಮಾ ಕಟ್ಟಡ, ಜೆ.ಸಿ.ರಸ್ತೆ, ೧ ನೇ ಅಡ್ಡರಸ್ತೆ, ಬೆಂಗಳೂರು - ೫೬೦ ೦೨೭ ಅಥವಾ ದೂರವಾಣಿ ಸಂಖ್ಯೆ ೦೮೦ - ೨೨೧೦೩೧೦೫ ಇಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬಹುದೆಂದು ಅಬಕಾರಿ ಉಪ-ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ವಿವಿದೆಡೆ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ
ಬೆಂಗಳೂರು ಮಾ ೧೫ (ಕರ್ನಾಟಕ ವಾರ್ತೆ) - ಮಾರ್ಚ್ ೧೫ ರಿಂದ ೨೨ ರವರೆಗೂ ನಗರದ ವಿವಿಧೆಡೆ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ ೧೫ ರಂದು ರಾಜಾಜಿನಗರ ೫ನೇ ಬ್ಲಾಕ್‌ನಲ್ಲಿರುವ ಸಹಕಾರ ಭವನ, ಮಾರ್ಚ್ ೧೭ ರಂದು ಮಲ್ಲೇಶ್ವರಂನ ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಮಾರ್ಚ್ ೧೮ ರಂದು ಆಲಿ ಆಸ್ಕರ್ ರಸ್ತೆಯಲ್ಲಿರುವ ಕೆ.ಎ.ಎಸ್. ಅಸೋಸಿಯೇಷನ್, ಮಾರ್ಚ್ ೧೯ ರಂದು ಬಸವನಗುಡಿಯ ಮಾಸ್ತಿ ರಂಗಮಂದಿರ, ಮಾರ್ಚ್ ೨೦ ರಂದು ಹಲಸೂರಿನ ಬಿ.ಬಿ.ಎಂ.ಪಿ. ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಮಾರ್ಚ್ ೨೨ ರಂದು ಕಬ್ಬನ್ ಉದ್ಯಾನದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೧.೦೦ ಗಂಟೆಗೆ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಸ್ತು ಪ್ರದರ್ಶನದ ಜೊತೆಗೆ ಗ್ರಾಹಕ ಜಾಗೃತಿ ಸಾಕ್ಷಚಿತ್ರದ ಸಿ.ಡಿ.ಯನ್ನು ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
ಚುನಾವಣೆ -ತರಬೇತಿಗೆ ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮ
ಬೆಂಗಳೂರು, ಮಾರ್ಚ್ ೧೫, (ಕರ್ನಾಟಕ ವಾರ್ತೆ) -ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೯೮ ವಾರ್ಡ್‌ಗಳಿಗೆ ಮಾರ್ಚ್ ೨೮ ರಂದು ಆಯುಕ್ತರು, ರಾಜ್ಯ ಚುನಾವಣಾ ಆಯೋಗ ಇವರು ಕಾರ್ಪೋರೇಟರ್‌ಗಳ ಚುನಾವಣೆಯನ್ನು ಬೆಳಿಗ್ಗೆ ೭.೦೦ ರಿಂದ ಸಂಜೆ ೫.೦೦ ಗಂಟೆವರೆಗೆ ನಡೆಸಬೇಕೆಂದು ನಿಗಧಿಪಡಿಸಿರುವ ಹಿನ್ನೆಲೆಯಲ್ಲಿ ದಿನಾಂಕ ೧೪-೩-೨೦೧೦ ರ ಭಾನುವಾರದಂದು ಮತಗಟ್ಟೆ ಸಿಬ್ಬಂದಿಯಾದ ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು ಪೋಲಿಂಗ್ ಅಧಿಕಾರಿಗಳಿಗೆ ತರಬೇತಿಯನ್ನು ನಿಗದಿಗೊಳಿಸಲಾಗಿತ್ತು. ಈ ತರಬೇತಿಗೆ ಹಾಜರಾಗದೇ ಇರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೧ ರಕಲಂ ೧೩೪(೧)(೧) ರ ಅಡಿ ಕ್ರಿಮಿನಲ್ ಮೊಕದ್ದಮೆಯನ್ನು ಇನ್ನು ೪೮ ಗಂಟೆಗಳಲ್ಲಿ ದಾಖಲಿಸಲಾಗುತ್ತಿದೆ. ಮತ್ತು ಇವರನ್ನು ಅಮಾನತ್ತಿನಲ್ಲಿಡಲೂ ಸಹ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇನ್ನು ೫ ದಿನಗಳಲ್ಲಿ ಗೈರು ಹಾಜರಾದ ಎಲ್ಲಾ ಅಧಿಕಾರಿ ಮತ್ತು ನೌಕರರ ಅಮಾನತ್ತು ಆದೇಶಗಳನ್ನು ಆಯಾ ಕಚೇರಿ ಮುಖ್ಯಸ್ಥರಿಗೆ ಈ ಕಚೇರಿಯಿಂದ ರವಾನಿಸಲಾಗುತ್ತದೆ.
ಗೈರುಹಾಜರಾದ ಎಲ್ಲಾ ಅಧಿಕಾರಿಗಳು/ನೌಕರರು ದಿನಾಂಕ ೨೧-೩-೨೦೧೦ ರ ಭಾನುವಾರದಂದು ತಮಗೆ ಈಗಾಗಲೇ ನಿಯೋಜಿಸಿರುವ ಸ್ಥಳದಲ್ಲಿ ತರಬೇತಿಗೆ ಹಾಜರಾಗತಕ್ಕದ್ದೆಂದು ಅಂತಿಮ ಎಚ್ಚರಿಕೆಯನ್ನು ನೀಡಲಾಗಿದೆ. ಈ ಎಲ್ಲಾ ವ್ಯಕ್ತಿಗಳು ಇನ್ನೆರಡು ದಿನಗಳಲ್ಲಿ ತಮಗೆ ಸಂಬಂಧಪಟ್ಟ ಚುನಾವಣಾಧಿಕಾರಿಗಳ ಸಮಕ್ಷಮ ಹಾಜರಾಗಿ ತಾವು ತರಬೇತಿಗೆ ಹಾಜರಾಗುವ ಬಗ್ಗೆ ಮುಚ್ಚಳಿಕೆಯನ್ನು ಬರೆದು ಕೊಡಬೇಕೆಂದು ಬೆಂಗಳೂರು ಜಿಲ್ಲೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವರ್ಧಾತ್ಮಕ ಪರೀಕ್ಷೆ: ಅಂಕಗಳ ಪ್ರಕಟ
ಬೆಂಗಳೂರು, ಮಾರ್ಚ್ ೧೫ (ಕರ್ನಾಟಕ ವಾರ್ತೆ)- ಕರ್ನಾಟಕ ಲೋಕಸೇವಾ ಆಯೋಗವು ೮-೧೧-೨೦೦೯ ರಂದು ಸಮಾಜ ಕಲ್ಯಾಣ ಇಲಾಖೆಯಲ್ಲಿನ ಸೀನಿಯರ್ ವಾರ್ಡನ್ (ಬಾಲಕ) ಬಾಲಕಿಯರು ಮತ್ತು ವಾರ್ಡನ್ (ಬಾಲಕ)ಬಾಲಕಿಯರು) ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ವಾರ್ಡನ್ (ಬಾಲಕ) (ಬಾಲಕಿಯರು) ಹುದ್ದೆಗಳ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಆಯೋಗದ ವೆಬ್‌ಸೈಟ್ hಣಣಠಿ:ಞಠಿsಛಿ.ಞಚಿಡಿ.ಟಿi.ಛಿiಟಿ ನಲ್ಲಿ ಹಾಗೂ ತನ್ನ ಕಛೇರಿಗಳಲ್ಲಿ ಪ್ರಕಟಿಸಿದೆ. ಮರು ಎಣಿಕೆಗೆ ಅವಕಾಶವಿರುವುದಿಲ್ಲ. ಆದರೆ ನೈಜ ಆಕ್ಷೇಪಣೆಗಳು ಇದ್ದಲ್ಲಿ (ಪತ್ರಿಕೆ -೧ ಮತ್ತು ೨) ಓ.ಎಂ.ಆರ್. ಹಾಳೆಯ ಜೆರಾಕ್ಸ್ ಪ್ರತಿಯೊಂದಿಗೆ ಶುಲ್ಕ ೧೦೦/- ರೂ.ಗಳನ್ನು ಪಾವತಿಸಿ (ಪ್ರತಿ ಪತ್ರಿಕೆಗೆ) ಮಾರ್ಚ್ ೨೨ ರೊಳಗೆ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.