ಸಕಲೇಶಪುರ, ಡಿಸೆಂಬರ್ 24: ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸ್ಥಾನಕ್ಕೆ ಕ್ಯಾಮನಹಳ್ಳಿ ಕೃಷ್ಣೇಗೌಡರನ್ನು ನೇಮಿಸುವಂತೆ ತಾಲ್ಲೂಕು ಬಿ.ಜೆ.ಪಿ ಕಾರ್ಯಕರ್ತರು ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.
ಇವರ ಪರವಾಗಿ ಸಹಿ ಸಂಗ್ರಹಣೆಯಲ್ಲಿ ತೊಡಗಿರುವ ಕಾರ್ಯಕರ್ತರು, ಕೃಷ್ಣೇಗೌಡರು ಮೂಲ ಬಿ.ಜೆ.ಪಿ ಯವರಾಗಿದ್ದು, ಕಳಂಕ ರಹಿತರಾದ ಇವರು ಎರಡು ಬಾರಿ ಜಿಲ್ಲಾ ಉಪಾಧ್ಯಕ್ಷರಾಗಿ ಮತ್ತು ತಾಲ್ಲೂಕು ಮಟ್ಟದ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವವಿದೆ. ಅಲ್ಲದೆ ಉತ್ತಮ ಸಂಘಟನಾಕಾರರಾದ ಇವರು ಇತರ ಪಕ್ಷದ ಹಲವಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸುವ ಮೂಲಕ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ದಾಖಲೆ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸುವ ಮೂಲಕ ತಾಲ್ಲೂಕಿನಲ್ಲಿ ಪಕ್ಷ ಬಲಾಡ್ಯವಾಗಲು ಇವರು ಪ್ರಮುಖ ಕಾರಣರಾಗಿದ್ದಾರೆ ಎಂದು ಪಕ್ಷದ ಮುಖಂಡರ ಗಮನಕ್ಕೆ ತರುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಅಜಾತ ಶತ್ರುವಾದ ಇವರಿಗೆ ಅಧ್ಯಕ್ಷ ಸ್ಥಾನ ಲಭಿಸಿದರೆ ಜಿಲ್ಲೆಯಲ್ಲಿ ಸಂಘಟನಾ ಕೊರತೆಯಿಂದ ಬಳಲಿರುವ ಪಕ್ಷಕ್ಕೆ ಹೊಸ ಚೈತನ್ಯ ನೀಡಿದಂತಾಗುವುದಲ್ಲದೆ, ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಸಧೃಡಗೊಳಿಸಲು ಸಾದ್ಯ ಎಂಬುದನ್ನು ಮನವರಿಕೆಮಾಡಿಕೊಟ್ಟಿದ್ದಾರಂದು ತಿಳಿದು ಬಂದಿದೆ.
ಜಿಲ್ಲಾ ಉಸ್ತುವಾರಿ ವಹಿಸಿರುವ ನಾಗರಾಜ ಶಟ್ಟಿ ಯವರಿಗೆ ತಾಲೂಕು ಮಾಜಿ ಅಧ್ಯಕ್ಷರಾದ ಯಡ್ರಹಳ್ಳಿ ಜಯಣ್ಣ, ಪುರಸಬೆ ನಾಮಾನಿರ್ದೆಶಿತ ಸದಸ್ಯ ನಂದೀಶ್, ಹೆಗ್ಗದ್ದೆ ಗ್ರಾ.ಪಂ ಮಾಜಿ ಅಧ್ಯಕ್ಷ ಮೋನಪ್ಪ, ಬಿ.ಜೆ.ಪಿ ಮಾಜಿ ನಗರಾಧ್ಯಕ್ಷ ರಾಜ್ ಕುಮಾರ್, ಪಕ್ಷದ ಮುಖಂಡ ನಾರಾಯಣ ಆಳ್ವ, ಕ್ಯಾಮನಹಳ್ಳಿ ಗ್ರಾ.ಪಂ ಸದಸ್ಯ ಡಿ.ರಾಜ್‌ಕುಮಾರ್, ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿ ಮಂಜುನಾಥ್‌ಸಾಂಘ್ವಿ, ಸೇರಿತಂತೆ ನೂರಾರು ಕಾರ್ಯಕರ್ತರು ಸಹಿ ಮಾಡಿ ಮನವಿಮಾಡಿದ್ದಾರೆ.
ಜಿಲ್ಲೆಯ ಎತರೆ ಪ್ರದೇಶದ ಕಾರ್ಯಕರ್ತರು ಕ್ಯಾಮನಹಳ್ಳಿ ಕೃಷ್ಣೇಗೌಡರ ಬೆಂಬಲಕ್ಕೆ ನಿಂತಿದ್ದು ಡಿ.೩೦ ರಂದು ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸ್ಥಾನದ ನೇಮಕವಾಗಲಿದೆ ಎಂದು ಹೇಳಲಾಗುತ್ತಿದೆ.