ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಸಮಾಜದಲ್ಲಿ ಕ್ರೀಡಾಪಟುವಿಗೆ ಉತ್ತಮ ಗೌರವ - ತಹಸೀಲ್ದಾರ್ ಎಸ್.ಎಂ. ನಾಯ್ಕ

ಭಟ್ಕಳ: ಸಮಾಜದಲ್ಲಿ ಕ್ರೀಡಾಪಟುವಿಗೆ ಉತ್ತಮ ಗೌರವ - ತಹಸೀಲ್ದಾರ್ ಎಸ್.ಎಂ. ನಾಯ್ಕ

Tue, 15 Dec 2009 03:20:00  Office Staff   S.O. News Service
ಭಟ್ಕಳ, ಡಿಸೆಂಬರ್ 14: ಪೋಲಿಸ್ ಇಲಾಖೆಯ ಸಿಬ್ಬಂಧಿಗಳ ಮಕ್ಕಳಿಗಾಗಿ ಆಯೋಜಿಸಿದ ಭಟ್ಕಳ ಉಪವಿಭಾಗದ  ಮಕ್ಕಳ ಕ್ರೀಡಾಕೂಟವನ್ನು ತಹಸಿಲ್ದಾರ ಎಸ್.ಎಮ್. ನಾಯ್ಕ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕ್ರೀಡೆಯು ಜೀವನದಲ್ಲಿ ಅತಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಸಮಾಜದಲ್ಲಿ ಕ್ರಿಡಾಪಟುವಿಗೆ ಉತ್ತಮ ಗೌರವವಿದೆ ಎಂದರು. ಕ್ರೀಡೆಯಲ್ಲಿ ಯಾವುದೆ ಜಾತಿ ಭೇದ ಸಲ್ಲದು ಎಂದ ಅವರು ಇದರಿಂದಾಗಿ ಸಮಾಜದಲ್ಲಿ ಸೌಹಾರ್ಧತೆ ಮೂಡುತ್ತದೆ ಎಂದರು. 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಡಿ.ವೈ.ಎಸ್.ಪಿ. ಡಾ.ಸಿ.ಬಿ.ವೇದಮೂರ್ತಿ ಸದಾ ಒತ್ತಡದಲ್ಲಿಯೆ ಕಾರ್ಯನಿರ್ವಸುವ ಪೋಲಿಸರಿಗೆ ತಮ್ಮ ಮಕ್ಕಳೊಂದಿಗೆ ಕಾಲಕಳೆಯು ಇದೊಂದು ಉತ್ತಮ ಅವಕಾಶವಾಗಿದೆ. ಇದಕ್ಕಾಗಿ ಅವರು ಇಲಾಖೆ ಇದಕ್ಕಾಗಿ ಅವಕಾಶ ಮಾಡಿಕೊಟ್ಟಿದೆ ಎಂದರು. ವೇದಿಕೆಯಲ್ಲಿ ಹೊನ್ನಾವರ ಸಿ.ಪಿ.ಐ ಜಗದೀಶ್ ಬಾಬು, ನಿರ್ಣಕರಾದ ಗಣಪತಿ ನಾಯ್ಕ, ಅಬ್ದುಲ್ ರಷೀದ್, ಮತ್ತಿತತರು ಉಪಸ್ಥಿತರಿದ್ದರು. ದರ್ಶಿನಿ ಅಂಕೋಲೆಕರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗ್ರಾಮೀಣ ಪಿ.ಎಸ್.ಐ ತಿಮ್ಮಪ್ಪ ನಾಯ್ಕ ಸ್ವಾಗತಿಸಿದರು. ನಗರಠಾಣೆಯ ಅಪರಾಧ ವಿಭಾಗದ ಉಮೇಶ ಕಾಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು.


Share: