ಬೆಂಗಳೂರು, ಮಾರ್ಚ್ ೧೫, (ಕರ್ನಾಟಕ ವಾರ್ತೆ) - ಕರ್ನಾಟಕ ಲೋಕಸೇವಾ ಆಯೋಗವು ೨೦೦೯ ನೇ ಸಾಲಿನ ಪರೀಕ್ಷೆಗಳ ಫಲಿತಾಂಶವನ್ನು (ಕನ್ನಡ ಭಾಷೆ ವಿಷಯವನ್ನು ಹೊರತುಪಡಿಸಿ).ಆಯೋಗದ ಕೇಂದ್ರ ಕಚೇರಿ, ಪ್ರಾಂತೀಯ ಕಚೇರಿಗಳು ಹಾಗೂ ಸಾರ್ವಜನಿಕರ ಶಿಕ್ಷಣ ಇಲಾಖೆಯ ಡಯಟ್ ಕಚೇರಿಗಳು/ಉಪ ನಿರ್ದೇಶಕರ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.
ಸದರಿ ಪರೀಕ್ಷೆಯ ಫಲಿತಾಂಶ ಮತ್ತು ಅಭ್ಯರ್ಥಿಗಳ ಅಂಕಗಳು ಆಯೋಗದ ವೆಬ್ಸೈಟ್ ನಲ್ಲೂ ಲಭ್ಯವಿದೆ. ಅನುತ್ತೀರ್ಣರಾದ ಅಭ್ಯರ್ಥಿಗಳು ಅಂಕಗಳ ಮರುಎಣಿಕೆಗೆ ಅರ್ಜಿಗಳನ್ನು ಫಲಿತಾಂಶ ಪ್ರಕಟಿಸಿದ ೩೦ ದಿನಗಳೊಳಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.
ಏಪ್ರಿಲ್ ೧ ರಿಂದ ೨೪ ರವರೆಗೆ ಸರಕು ಪರಿಶೀಲನೆ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಲೇಖನ ಸಾಮಗ್ರಿ ಸ್ಥಗಿತ
ಬೆಂಗಳೂರು, ಮಾರ್ಚ್ ೧೫, (ಕರ್ನಾಟಕ ವಾರ್ತೆ) - ೨೦೦೯-೧೦ ನೇ ಸಾಲಿನ ವಾರ್ಷಿಕ ಸರಕು ಪರಿಶೀಲನೆಯ ಪ್ರಯುಕ್ತ ಬೆಂಗಳೂರಿನಲ್ಲಿರುವ ಸರ್ಕಾರಿ ಲೇಖನ ಸಾಮಗ್ರಿ ಮಳಿಗೆಯಲ್ಲಿ ಏಪ್ರಿಲ್ ೧ ರಿಂದ ೨೪ ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಲೇಖನ ಸಾಮಗ್ರಿಗಳ ಮತ್ತು ಕಾಗದದ ನೀಡಿಕೆಯನ್ನು ನಿಲ್ಲಿಸಲಾಗಿದೆ ಎಂದು ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.