ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು ಉಚಿತ ತರಬೇತಿ

ಮಂಗಳೂರು ಉಚಿತ ತರಬೇತಿ

Fri, 30 Apr 2010 13:49:00  Office Staff   S.O. News Service
       
ಮಂಗಳೂರು, ಏಪ್ರಿಲ್ ೩೦: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಗಳೂರು ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ೧೦ ವಾರಗಳ ಕಾಲ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಯೋಗ ಪಡೆಯಲು ಅಗತ್ಯ ಕೌಶಲ್ಯಗಳಾದ ಸಂವಹನ, ಆತ್ಮವಿಶ್ವಾಸ ಅಭಿವೃದ್ಧಿ, ಸಕಾರಾತ್ಮಕ ಮತ್ತು ಆತ್ಮ ಗೌರವ ಅಭಿವೃದ್ಧಿ ಜೊತೆಗೆ ಇತರ ಉಪಯುಕ್ತ ಕೌಶಲ್ಯಗಳಾದ ಇಂಗ್ಲಿಷ್ ಭಾಷಾ ಸಂವಹನ, ಬರವಣಿಗೆ, ಭಾಷಣ ಕಲೆ ಅಲ್ಲದೆ ಕಂಪ್ಯೂಟರ್ ಬಳಕೆ, ಇಂಟರ್ ನೆಟ್ ಉಪಯೋಗ ಇತ್ಯಾದಿ ಹಲವು ಉದ್ಯೋಗ ಪಡೆಯಲು ಪೂರಕ ಜ್ಞಾನ ಹಾಗೂ ತರಬೇತಿಯನ್ನು ಅನುಭವಿ ಹಾಗೂ ನುರಿತ ತರಬೇತಿದಾರರಿಂದ ನೀಡಲಾಗುತ್ತಿದೆ. 
ಅಸಕ್ತರು ತತ್ ಕ್ಷಣದಿಂದಲೇ ಮಾನವಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ) ಮಂಗಳೂರು ಮಹಾನಗರಪಾಲಿಕೆ ಕಟ್ಟಡ, ಲಾಲ್ ಬಾಗ್ ಮಂಗಳೂರು- ೫೭೫ ೦೦೩ ಇಲ್ಲಿ ಬಂದು ವ್ಯಕ್ತಿ ಪರಿಚಯ ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ ಶ್ರೀ ಎಸ್ ಡಿ ಬಸವರಾಜು ಅವರನ್ನು ಸಂಪರ್ಕಿಸಬಹುದು. ದೂ.ಸಂ. ೦೮೨೪- ೨೪೫೦೧೬೯.


Share: